HomeKarnataka'ವರ್ಷಗಳೇ ಕಳೆದರೂ ಆರದ ದೀಪ, ಬಾಡದ ಹೂವು’ : ‘ಹಾಸನಾಂಬೆ ದೇವಿ’ ಪವಾಡ ಕಂಡು ಪಾವನರಾದ...

‘ವರ್ಷಗಳೇ ಕಳೆದರೂ ಆರದ ದೀಪ, ಬಾಡದ ಹೂವು’ : ‘ಹಾಸನಾಂಬೆ ದೇವಿ’ ಪವಾಡ ಕಂಡು ಪಾವನರಾದ ಭಕ್ತರು

ಹಾಸನ : ಐತಿಹಾಸಿಕ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ನಿನ್ನೆಯಿಂದ ಓಪನ್ ಆಗಿದ್ದು, ಇಂದು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ಆಶ್ವೀಜ ಮಾಸದ ಮೊದಲ ಗುರುವಾರ (ನಿನ್ನೆ) ಅರಸು ವಂಶಸ್ಥ ನಂಜರಾಜೇ ಅರಸ್ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ.ವರ್ಷದ ಹಿಂದೆ ಹಚ್ಚಿಟ್ಟದ್ದ ದೀಪ ಇನ್ನು ಉರಿಯುತ್ತಿತ್ತು, ಹಾಗೂ ಅಲಂಕರಿಸಿದ ಹೂಗಳು ಕೂಡ ಬಾಡದೇ ಹಾಳಾಗಿರಲಿಲ್ಲ, ಈ ಪವಾಡ ಕಂಡು ಜನರು ಪಾವನರಾಗಿದ್ದಾರೆ.

ಇಂದು ಮುಂಜಾನೆಯೇ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಭಕ್ತರು ಹಾಸನಾಂಬೆಯ ದರ್ಶನ ಪಡೆಯಲು ಸರದಿಯ ಸಾಲಿನಲ್ಲಿ ನಿಂತಿದ್ದಾರೆ.ಕಿಲೋಮೀಟರ್ ವರೆಗೂ ಭಕ್ತರ ಸರದಿ ಸಾಲು ಹರಿದಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ.2 ರಿಂದ 15ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ 14 ದಿನ ಗಳಲ್ಲಿ 12 ದಿನಗಳ ಕಾಲ ಮಾತ್ರ ಹಾಸನಾಂಬೆ ದೇವಿ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ದಿನದ 24 ಗಂಟೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular