HomeCrimeViral Video: ಅಪಘಾತಕ್ಕೀಡಾದ ಕಾರಿನಲ್ಲಿತ್ತು ಅಕ್ರಮ ಮದ್ಯ; ಪುಕ್ಕಟ್ಟೆ ಎಣ್ಣೆಗಾಗಿ ಮುಗಿಬಿದ್ದ ಜನ...!

Viral Video: ಅಪಘಾತಕ್ಕೀಡಾದ ಕಾರಿನಲ್ಲಿತ್ತು ಅಕ್ರಮ ಮದ್ಯ; ಪುಕ್ಕಟ್ಟೆ ಎಣ್ಣೆಗಾಗಿ ಮುಗಿಬಿದ್ದ ಜನ…!

ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಆದರೂ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಇದೀಗ ಕಾರೊಂದರಲ್ಲಿ ಮದ್ಯದ ಬಾಟಲಿ ತುಂಬಿಕೊಂಡು ಹೋದಾಗ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಎಲ್ಲವನ್ನೂ ಬಿಟ್ಟು ಮದ್ಯ ಲೂಟಿ ಮಾಡಲು ಆರಂಭಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ.

ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದೆ. ಮದ್ಯ ತುಂಬಿದ ಕಾರು ಅಪಘಾತಕ್ಕೀಡಾಗಿದೆ. ಕಾರು ಅಪಘಾತವಾದ ನಂತರ ಕಾರಿನಲ್ಲಿ ಮದ್ಯ ತುಂಬಿರುವುದು ಜನರಿಗೆ ತಿಳಿದು ಬಂತು. ಚಾಲಕನ ಪರಿಸ್ಥಿತಿ ಏನಾಗಿರಬಹುದು ಎಂದೂ ನೋಡದೆ ಅಲ್ಲಿದ್ದ ಜನರು ಮದ್ಯ ಲೂಟಿ ಮಾಡಲು ಶುರು ಮಾಡಿದ್ದಾರೆ. ಆದರೆ, ಆ ವೇಳೆಗಾಗಲೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಮಧ್ಯದಲ್ಲಿ ಅಪಘಾತಕ್ಕೀಡಾಗಿ ನಿಂತ ಕಾರಿನ ಬಳಿ ಜನರು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಓಡುತ್ತಿರುವ ದೃಶ್ಯ ಕಂಡು ಬಂದಿದೆ. ಅಕ್ಕಪಕ್ಕದಲ್ಲಿ ದೊಡ್ಡ ವಾಹನಗಳು ಹಾದು ಹೋಗುತ್ತಿದ್ದರೂ ಯಾರೂ ಕ್ಯಾರೇ ಎನ್ನದೆ, ಕೇವಲ ಮದ್ಯವನ್ನು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಒಂದು ಅಥವಾ ಎರಡು ಬಾಟಲಿಗಳಲ್ಲಿ ಸ್ವರ್ಗ ಸಿಕ್ಕರೆ ಕಾನೂನಿನ ಭಯ, ಜೀವದ ಚಿಂತೆ ಇರುವುದಿಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮದ್ಯ ನಿಷೇಧದಿಂದಾಗಿ ಜನರು ಕುಡಿಯುವುದನ್ನು ನಿಲ್ಲಿಸುವುದಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಆದರೆ, ಅನೇಕ ಸಂದರ್ಭಗಳಲ್ಲಿ ಅವರು ವಿಷಯುಕ್ತ ಮದ್ಯವನ್ನು ಕುಡಿಯುತ್ತಾರೆ. ಇದು ಹೆಚ್ಚು ಅಪಾಯಕಾರಿಯಾಗಿದ್ದು, ಅಪರಾಧ ಮತ್ತು ಭ್ರಷ್ಟಾಚಾರವನ್ನು ಹೆಚ್ಚಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular