HomeKarnatakaಸಾರ್ವಜನಿಕರೇ ಎಚ್ಚರ : ವನ್ಯಜೀವಿಗಳ ಉಗುರು, ಕೂದಲು, ಹಲ್ಲಿನಿಂದ ಮಾಡಿದ ಆಭರಣ ಬಳಕೆ ಮಾಡಿದ್ರೆ ...

ಸಾರ್ವಜನಿಕರೇ ಎಚ್ಚರ : ವನ್ಯಜೀವಿಗಳ ಉಗುರು, ಕೂದಲು, ಹಲ್ಲಿನಿಂದ ಮಾಡಿದ ಆಭರಣ ಬಳಕೆ ಮಾಡಿದ್ರೆ ಜೈಲು `ಗ್ಯಾರಂಟಿ’!

ಬೆಂಗಳೂರು :  ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರಂತೆ, ವನ್ಯಪ್ರಾಣಿಗಳ ಹಾಗು ಅವುಗಳ ವಸ್ತುಗಳ ವ್ಯಾಪಾರ ವನ್ಯಜೀವಿಗಳನ್ನು ಬೇಟೆ ಆಡುವುದು, ಸ್ವಾಧೀನಪಡಿಸಿಕೊಳ್ಳುವುದು, ಇಟ್ಟುಕೊಳ್ಳುವುದು, ಸಾಕುವುದು, ಖರೀದಿಸುವುದು, ಸಾಗಣೆ ಮಾಡುವುದು, ವ್ಯಾಪಾರ ಮಾಡುವುದು, ಮಾಂಸ ಮಾರಾಟ/ಭಕ್ಷಣೆ ಮಾಡಿದ್ರೆ 3ರಿಂದ 7 ವರ್ಷ ಜೈಲು ಮತ್ತು 1ಲಕ್ಷ ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತದೆ.

ವನ್ಯಜೀವಿಗಳ ವಸ್ತುಗಳು, ಟ್ರೋಫಿಗಳು, ಕೊಂಬು, ಚರ್ಮ, ಉಗುರು, ಗೊರಸು, ಹಲ್ಲು ಅಥವಾ ವನ್ಯಜೀವಿಗಳ ವಸ್ತುಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳ ವ್ಯವಹಾರ, ಉಡುಗೊರೆ ಪಡೆದುಕೊಳ್ಳುವುದು, ಖರೀದಿಸುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು, ಇನ್ನೊಬ್ಬರಿಗೆ ವರ್ಗಾಯಿಸುವುದು, ವನ್ಯಪ್ರಾಣಿಗಳ ಚರ್ಮದ ಬಳಕೆ, ಉಗುರು, ಕೂದಲು ಹಲ್ಲಿನಿಂದ ಮಾಡಿದ ಅಭರಣದ ಬಳಕೆ, ಅಪರಾಧ ಉಲ್ಲಂಘಿಸಿದರೆ, 3ರಿಂದ 7 ವರ್ಷ ಜೈಲು ಮತ್ತು 1ಲಕ್ಷ ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular