
ಈ ಘಟನೆ ನಡೆದ ಸ್ಥಳ, ದಿನಾಂಕ ಹಾಗೂ ಸಮಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಯುಸೂಫ್ ಅಲ್ ಸೈಫಿ ಎಂಬ ಪ್ಯಾಲಸ್ಟೈನ್ ಪತ್ರಕರ್ತ ರೆಕಾರ್ಡ್ ಮಾಡಿರುವ ವಿಡಿಯೋ ಇದಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 41 ಸೆಕೆಂಡುಗಳ ವಿಡಿಯೋದಲ್ಲಿ ಕಾರನ್ನು ಗುರಿಯಾಗಿಟ್ಟು ನಡೆದ ಸ್ಪೋಟವನ್ನು ಕಾಣಬಹುದಾಗಿದೆ.
ರಸ್ತೆಗೆ ಅಡ್ಡಲಾಗಿ ಇದ್ದ ತಾತ್ಕಾಲಿಕ ತಡೆಗೋಡೆ ಸಮೀಪ ಕಾರು ಬಂದಿರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ನಿಲುಗಡೆಗೊಳ್ಳಬೇಕಿದ್ದ ಕಾರು ಸೀದಾ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತದೆ. ಆದರೆ ಅಲ್ಲೇ ಇದ್ದ ಟ್ಯಾಂಕ್ನಿಂದ ಕಾರಿನ ಮೇಲೆ ಗುಂಡು ಹಾರಿಸುತ್ತಿರೋದನ್ನು ಕಾಣಬಹುದಾಗಿದೆ. ಇದರಿಂದ ಕಾರು ಹಠಾತ್ ಸ್ಫೋಟಗೊಂಡಿದೆ.

