ಸಾಕು ಪ್ರಾಣಿಯನ್ನು ಹಿಡಿದಿದ್ದ ಮಹಿಳೆ ಹಾಗೂ ನಿವೃತ್ತ ಐಎಎಸ್ ಅಧಿಕಾರಿಯೊಂದಿಗೆ ವಾಗ್ವಾದ ತಾರಕಕ್ಕೇರಿದ ಪರಿಣಾಮ ನಿವೃತ್ತ ಐಎಎಸ್ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆಯು ನೋಯ್ಡಾದ ಸೆಕ್ಟರ್ 18ರ ಪಾರ್ಕ್ ಲಾರೇಟ್ ಸೊಸೈಟಿಯಲ್ಲಿ ನಡೆದಿದೆ. ನಿವೃತ್ತ ಐಎಎಸ್ ಅಧಿಕಾರಿಯನ್ನು ಆರ್.ಪಿ. ಗುಪ್ತಾ ಎಂದು ಗುರುತಿಸಲಾಗಿದೆ. ಈ ಸಂಬಂಧ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಾಯಿ ಮಾಲೀಕೆ ಇಬ್ಬರೂ ತಮ್ಮ ತಮ್ಮ ಫೋನ್ಗಳಲ್ಲಿ ಘಟನೆ ಚಿತ್ರೀಕರಿಸಲು ಮುಂದಾಗಿದ್ದು ಈ ವೇಳೆ ಇಬ್ಬರ ನಡುವೆ ಗಲಾಟೆ ಆರಂಭಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಘಟನೆಯ ವಿಡಿಯೋ ಮಾಡಲು ಯತ್ನಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯ ಕೈನಿಂದ ಮಹಿಳೆಯು ಮೊಬೈಲ್ ಫೋನ್ ಕಸಿಯಲು ಯತ್ನಿಸುತ್ತಿರೋದನ್ನು ಕಾಣಬಹುದಾಗಿದೆ. ಇದಾದ ಬಳಿಕ ಗುಪ್ತಾ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಮಹಿಳೆಯ ಪತಿ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿಯು ಮಹಿಳೆಗೆ ಕಪಾಳ ಮೋಕ್ಷ ಮಾಡಿದ ಬಳಿಕ ಗುಪ್ತಾರಿಗೆ ಥಳಿಸುತ್ತಿರೋದನ್ನೂ ಸಹ ವಿಡಿಯೋದಲ್ಲಿ ನೋಡಬಹುದಾಗಿದೆ. ಪೊಲೀಸ್ ಕಮಿಷನರೇಟ್, ಗೌತಮ್ ಬುದ್ಧ ನಗರ್ ಎಕ್ಸ್ನಲ್ಲಿ ಲಿಫ್ಟ್ನಲ್ಲಿ ನಾಯಿಯನ್ನು ಕೊಂಡೊಯ್ಯುವ ವಿಚಾರದಲ್ಲಿ ಈ ಗಲಾಟೆ ಸಂಭವಿಸಿದೆ ಎಂದು ಹೇಳಿದ್ದಾರೆ.
There was again a dispute over a dog in the lift in Noida. Retired IAS officer R. P GUPTA accused of slapping a woman. Woman stopped for walking with dog, Retired IAS got furious when woman did not come out in lift, Controversy broke out over woman making video. pic.twitter.com/zFTgf8hEuf
— Save Children from #Stray_Dog_Menace (@IndianFightSdm) October 31, 2023

