ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 2024 ಬೈಕ್‌ನ ಚೊಚ್ಚಲ ಪ್ರದರ್ಶನ ನವೆಂಬರ್ 7ಕ್ಕೆ ನಿಗದಿಯಾಗಿದೆ. ರಾಯಲ್ ಎನ್‌ಫೀಲ್ಡ್ ಪರಿಚಯಿಸ್ತಿರೋ ಹೊಸ ಮೋಟಾರ್‌ಸೈಕಲ್ ಇದು. ಕ್ಲಾಸಿಕ್ 350 ಮತ್ತು ಇಂಟರ್‌ಸೆಪ್ಟರ್ 650 ಇವೆರಡದ ಮಧ್ಯದ ಮಾಡೆಲ್ ಅಂತಾನೇ ಹೇಳಲಾಗ್ತಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್, KTM ಅಡ್ವೆಂಚರ್ 390 ಮತ್ತು BMW G310 GS ನೊಂದಿಗೆ ಸ್ಪರ್ಧಿಸಲಿದೆ. ಅಧಿಕೃತ ಬಿಡುಗಡೆಗೂ ಮುನ್ನ ಸಾಹಸ ಪ್ರಿಯರ ಈ ಮೋಟಾರ್ ಸೈಕಲ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಅದರ ನೋಟ, ವೈಶಿಷ್ಟ್ಯಗಳನ್ನು ತಿಳಿಯೋಣ.
ಮೋಟಾರ್‌ಸೈಕಲ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುತ್ತದೆ. ಡ್ಯುಯಲ್-ಚಾನೆಲ್ ಎಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಇದು ಹೊಸ K1 ಡಬಲ್-ಕ್ರೇಡಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಮುಂಭಾಗದಲ್ಲಿ USD ಮುಂಭಾಗದ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಘಟಕವನ್ನು ಅಳವಡಿಸಲಾಗಿದೆ. ರೈಡ್-ಬೈ-ವೈರ್ ತಂತ್ರಜ್ಞಾನ, ಸ್ಮಾರ್ಟ್‌ಫೋನ್ ಸಂಪರ್ಕ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಎಲ್‌ಇಡಿ ಲೈಟಿಂಗ್ ಸಿಸ್ಟಮ್ ಇದರ ಮತ್ತೊಂದು ವಿಶೇಷತೆ.
ಈ ಮೋಟಾರ್ ಸೈಕಲ್ 1510 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಇದು ಹಿಮಾಲಯನ್ 411 ಗಿಂತ ಸುಮಾರು 45 ಎಂಎಂ ಉದ್ದವಾಗಿದೆ. ಈ ಮೋಟಾರ್‌ಸೈಕಲ್‌ನ ಕರ್ಬ್ ತೂಕ 196 ಕೆಜಿ ಇದ್ದರೆ, ಒಟ್ಟಾರೆ ತೂಕ ಬರೋಬ್ಬರಿ 394 ಕೆಜಿಯಷ್ಟಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 2024 ಮೋಟಾರ್ ಸೈಕಲ್‌ನ ಆಯಿಲ್ ಟ್ಯಾಂಕ್ ಮೊದಲ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ. ಇದು 21-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಚಕ್ರಗಳನ್ನು ಹೊಂದಿದೆ. ಆಫ್-ರೋಡ್-ರೆಡಿ ಟೈರ್ ಇದರ ವಿಶೇಷತೆ. ಟ್ಯೂಬ್ ಲೆಸ್ ಟೈರ್ ಅಳವಡಿಸಿದ್ದು, ಎಲ್ಇಡಿ ಹೆಡ್‌ಲೈಟ್, ದೊಡ್ಡ ವಿಂಡ್‌ಸ್ಕ್ರೀನ್, ಸ್ಪ್ಲಿಟ್ ಸೀಟಿಂಗ್ ಮತ್ತು ಕಾಂಪ್ಯಾಕ್ಟ್ ಟೈಲ್-ಸೆಕ್ಷನ್ ಅನ್ನು ಹೊಂದಿದೆ.
ರಾಯಲ್ ಎನ್‌ಫೀಲ್ಡ್‌ನ ಈ ಹೊಸ ಬೈಕ್, 451.66cc ಲಿಕ್ವಿಡ್-ಕೂಲ್ಡ್, 4-ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಪವರ್‌ಟ್ರೇನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.