ಬಳ್ಳಾರಿ : ರಾಜ್ಯದಲ್ಲಿ ಹುಲಿ ಉಗುರಿನ ಶೋಧ ನಡೆಯುತ್ತಿದ್ದು, ಇದೀಗ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪೋಟೋ ವೈರಲ್ ಆಗಿದೆ.
ಮದುವೆ ವೇಳೆ ಭರತ್ ರೆಡ್ಡಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ಸಾಮಾಜಿಕ ಪೆಂಡೆಂಟ್ ವೈರಲ್ ಆಗಿದೆ.
ಈ ಬಗ್ಗೆ ಭರತ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಇದು ಒರಿಜಿನಲ್ ಅಲ್ಲ, ಸಿಂಥೆಟಿಕ್ ಹುಲಿ ಉಗುರು. ಸಿಂಥೆಟಿಕ್ ಹುಲಿ ಉಗುರು ಸಿಗುವ ವಿಳಾಸ ಬೇಕಾದರೆ ಕೊಡುತ್ತೀನಿ ಎಂದು ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.ಹುಲಿ ಉಗುರಿನ ಪ್ರಕರಣದಲ್ಲಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಹುಲಿ ಉಗುರು ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಈ ಬಳಿಕ ಹಲವು ನಟ, ರಾಜಕಾರಣಿಗಳಿಗೂ ಹುಲಿ ಉಗುರು ಪರಚಿದೆ.