HomeKarnatakaGOOD NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಸಂಜೆ ವೇಳೆಯೂ ವಿಮಾನ ಹಾರಾಟ; ನವೆಂಬರ್ ನಿಂದ...

GOOD NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಸಂಜೆ ವೇಳೆಯೂ ವಿಮಾನ ಹಾರಾಟ; ನವೆಂಬರ್ ನಿಂದ ತಿರುಪತಿ ಸೇರಿದಂತೆ ಈ ನಗರಗಳಿಗೂ ವಿಮಾನ ಸೌಲಭ್ಯ

ಶಿವಮೊಗ್ಗ: ಶಿವಮೊಗ್ಗ ಏರ್ ಪೋರ್ಟ್ ನಿಂದ ನವೆಂಬರ್ ನಿಂದ ಸಂಜೆ ವೇಳೆಯಲ್ಲಿಯೂ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾನಕ್ಕೆ ಸಧ್ಯ ಇಂಡಿಗೋ ವಿಮಾನ ಸೇವೆ ಸೌಲಭ್ಯವಿದೆ. ಇದರ ಜೊತೆಗೆ ನವೆಂಬರ್ ನಿಂದ ಸ್ಟಾರ್ ಏರ್ ವಿಮಾನ ಕೂಡ ತನ್ನ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಸಂಜೆ ವೇಳೆಯೂ ವಿಮಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನವೆಂಬರ್ 17ರಿಂದ ಸ್ಟಾರ್ ಏರ್ ವಿಮಾನ ಹಾರಾಟ ಆರಂಭವಾಗಲಿದ್ದು, ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್, ಚೆನ್ನೈ ನಡುವೆ ಸೇವೆ ಆರಂಭಿಸಲಿದೆ. ಈಗಾಗಲೇ ಸ್ಟಾರ್ ಏರ್ ಶಿವಮೊಗ್ಗದಿಂದ ಕಾರ್ಯಾಚರಣೆ ನಡೆಸಲು ಎಲ್ಲಾ ಸಿದ್ಧತೆ ನಡೆಸಿದ್ದು, ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ ಎಂದು ತಿಳಿಸಿದರು.

ಏರ್ ಪೋರ್ಟ್ ನಿರ್ವಹಣೆಗೆ ತುಂಬಾ ಖರ್ಚು ಬರುತ್ತಿದೆ. ಖರ್ಚು ಸರಿದೂಗಿಸಲು ಸ್ಥಳೀಯವಾಗಿ ಬಂಡವಾಳ ಯೋಜನೆ ಚಿಂತನೆ ನಡೆದಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular