HomeEntertainmentBIG NEWS: ಪತಿಯ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ನಟಿ

BIG NEWS: ಪತಿಯ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ನಟಿ

ಬೆಂಗಳೂರು: ಖ್ಯಾತ ನಟಿ ನೈನಾ ಸರ್ವಾರ್ ಪತಿ ವಿರುದ್ಧ ದೌರ್ಜನ್ಯ ಹಾಗೂ ಕಿರುಕುಳ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಟಿ ನೈನಾ ಸರ್ವಾರ್ 5 ವರ್ಷಗಳ ಹಿಂದೆ ಉದ್ಯಮಿ ರಾಹುಲ್ ಅವರನ್ನು ವಿವಾಹವಾಗಿದ್ದರು. ಕೆಲಸವಿಲ್ಲದೇ ಸದಾ ಮನೆಯಲ್ಲೇ ಇರುತ್ತಿದ್ದ ಪತಿ ರಾಹುಲ್, ನೇಹಾಳಿಗೆ ನಿರಂತರವಾಗಿ ದೈಹಿಕ ಹಿಂಸೆ, ಹಲ್ಲೆ ನಡೆಸುವುದು, ಅಸಭ್ಯ ಶಬ್ಧಗಳಿಂದ ನಿಂದಿಸುವುದು, ಕಿರುಕುಳ ನೀಡುವುದು ಮಾಡುತ್ತಿದ್ದರಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿಯ ಹಿಂಸೆಗೆ ನೊಂದ ನೈನಾ, ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೇಹಾ ಪತಿ ರಾಹುಲ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನೈನಾ ಸರ್ವಾರ್ ಶ್ರೀನಗರ ಕಿಟ್ಟಿ ಅಭಿನಯದ ಏ ರಾಮ್, ಲೂಸ್ ಮಾದ ಯೋಗಿ ಅಭಿನಯದ ಕೋಲಾರ 1990 ಸೇರಿದಂತೆ ನಾಲ್ಕು ಕನ್ನಡ ಚಿತ್ರ, ಎರಡು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular