
‘ಕಾವಾಲಯ್ಯ’ ಹಾಡಿನಲ್ಲಿ ತಮನ್ನಾ ಕೊಳಕಾಗಿ, ಅಶ್ಲೀಲವಾಗಿ ಹೆಜ್ಜೆ ಹಾಕಿದ್ದಾರೆ ಎಂದು ನಟ ಮನ್ಸೂರ್ ಅಲಿ ಖಾನ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ತಮನ್ನಾ ಮಾದಕವಾಗಿ ಸೊಂಟ ಬಳುಕಿಸಿ, ಮೈಮಾಟ ಪ್ರದರ್ಶಿಸಿದ ‘ಕಾವಲಯ್ಯ’ ಹಾಡಿಗೆ ಸೆನ್ಸಾರ್ ಮಂಡಳಿಯಿಂದ ಹೇಗೆ ಅನುಮೋದನೆ ನೀಡಿತಯ ಎಂದು ಮನ್ಸೂರ್ ಅಲಿ ಖಾನ್ ಪ್ರಶ್ನಿಸಿದ್ದಾರೆ. ಹಾಡಿನ ಅರ್ಥವನ್ನು ತಮ್ಮ ನೃತ್ಯದ ಮೂಲಕ ಹಾಳು ಮಾಡಿದ್ದಾರೆ ಎಂದು ಖಾನ್ ಹೇಳಿದ್ದು, ಅವರ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಕಾವಾಲಯ್ಯ ಹಾಡಿಗೆ ಅರುಣ್ ರಾಜಾ ಕಾಮರಾಜ್ ಸಾಹಿತ್ಯ ಬರೆದಿದ್ದು ಶಿಲ್ಪಾ ರಾವ್ ಹಾಗೂ ಅನಿರುದ್ಧ್ ಹಾಡಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಈ ಹಾಡು ಬಹಳ ಹಿಟ್ ಆಗಿತ್ತು. ಭಾರಿ ಕ್ರೇಜ್ ಹುಟ್ಟು ಹಾಕಿದ್ದ ಹಾಡಿನ ಬಗ್ಗೆ ಖಾನ್ ಟೀಕಿಸಿದ್ದಾರೆ. ತಮನ್ನಾ ಸ್ಟೆಪ್ಸ್ ಬಹಳ ಅಶ್ಲೀಲವಾಗಿದೆ. ಸೆನ್ಸಾರ್ ಮಂಡಳಿಯಿಂದ ಆ ಹಾಡಿಗೆ ಹೇಗೆ ಅನುಮೋದನೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ.

