HomeKarnatakaBIG NEWS: ರಾಮನಗರ ಛಿದ್ರ ಮಾಡಲು ಆಗಲ್ಲ; ಚೂರು ಚೂರು ಮಾಡಲು ಅದೇನು ಕಲ್ಲು ಬಂಡೆಯೇ?;...

BIG NEWS: ರಾಮನಗರ ಛಿದ್ರ ಮಾಡಲು ಆಗಲ್ಲ; ಚೂರು ಚೂರು ಮಾಡಲು ಅದೇನು ಕಲ್ಲು ಬಂಡೆಯೇ?; ಡಿಸಿಎಂ ವಿರುದ್ಧ ಕಿಡಿ ಕಾರಿದ HDK

ಬೆಂಗಳೂರು: 7 ಜನ್ಮ ಎತ್ತಿ ಬಂದರೂ ರಾಮನಗರವನ್ನು ಛಿದ್ರ ಮಾಡಲು ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕನಕಪುರವನ್ನು ಬೆಂಗಳೂರಿಗೆ ಸೇರಿಸಲಾಗುವುದು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಯಾವ ಕಾರಣಕ್ಕೂ ರಾಮನಗರವನ್ನು ಒಡೆಯಲು ಸಾಧ್ಯವಿಲ್ಲ. ಚೂರು ಚೂರು ಮಾಡಲು ರಾಮನಗರವೇನು ಕಲ್ಲು ಬಂಡೆಯೇ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಡವರ ಹೊಟ್ಟೆ ಮೇಲೆ ಹೊಡೆಯುವ, ಕಂಡವರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡ ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ ಅದಕ್ಕೆ ಅಡ್ದ ಬಂದವರ ಜೀವ ತೆಗೆಯುವ ದುಷ್ಟ ಪ್ರಜ್ಞೆ ಖಂಡಿತಾ ನನಗಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಈ ಜನ್ಮ ಅಷ್ಟೇ ಅಲ್ಲ, ಇನ್ನೂ 7 ಜನ್ಮ ಎತ್ತಿ ಬಂದರೂ ರಾಮನಗರ ಛಿದ್ರ ಮಾಡಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

ಜನರ ಅನುಕೂಲ, ಅನಾನುಕೂಲವನ್ನು ಪರಿಶೀಲಿಸಿಯೇ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ. ಈಗ ಜಿಲ್ಲೆಯನ್ನು ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಜನ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಕುಮಾರಸ್ವಾಮಿ ಪ್ರಜ್ಞಾವಂತರು ಎಂದುಕೊಂಡಿದ್ದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ.ಕೆ. ದರ್ಪದ ಮಾತು, ದುಷ್ಟ ಪ್ರಜ್ಞೆ, ಅತಿಬುದ್ಧಿವಂತಿಕೆ, ಅಸಾಮಾನ್ಯ ಜ್ಞಾನ… ಅವರ ಪ್ರಜ್ಞಾವಂತಿಕೆ ಎಂಥಹುದು ಎಂಬುದು ಎಲ್ಲರಿಗೂ ಗೊತ್ತು ಎಂದು ಕಿಡಿಕಾರಿದರು.

 

For Latest News Updates, Join Our Whatsapp Community🚩
RELATED ARTICLES

Most Popular