HomeKarnatakaJOB ALERT : ಗುತ್ತಿಗೆ ಆಧಾರಿತ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

JOB ALERT : ಗುತ್ತಿಗೆ ಆಧಾರಿತ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಮಂಡಳಿ ವಿರುದ್ಧ ದಾಖಲಾಗುವ ಪ್ರಕರಣದಲ್ಲಿ ಮಂಡಳಿ ಪರವಾಗಿ ಹಾಜರಾಗಿ ವಾದ ಮಂಡಿಸಲು ಗುತ್ತಿಗೆ ಆಧಾರಿತ ಕಾನೂನು ಅಧಿಕಾರಿ ಹುದ್ದೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಎಲ್.ಎಲ್.ಪದವಿ ಜೊತೆಗೆ ಅಖಿಲ ಭಾರತ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮತ್ತು ಸಿವಿಲ್ ಪ್ರಕರಣಗಳಲ್ಲಿ 5 ವರ್ಷ ಅನುಭವ ಇರುವ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಚೆನ್ನಾಗಿ ಬಲ್ಲ ಅಭ್ಯರ್ಥಿಗಳು ಇದೇ ಅಕ್ಟೋಬರ್ 30 ರೊಳಗೆ ರೆಸ್ಯೂಮ್ ಜೊತೆಗೆ ಅಗತ್ಯ ದಾಖಲೆಗಳನ್ನು ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಕಚೇರಿಗೆ ಸಲ್ಲಿಸುವಂತೆ ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

ಆಯ್ಕೆಯಾದವರಿಗೆ ಮಾಸಿಕ 18,000 ರೂ. ವೇತನ ನೀಡಲಾಗುವುದು. ಕಲಬುರಗಿ ಹೊರತುಪಡಿಸಿ ಇತರೆ ಜಿಲ್ಲಾ, ತಾಲೂಕು ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಪ್ರಯಾಣಿಸಿದಲ್ಲಿ ನಿಯಮಾನುಸಾರ ಪ್ರಯಾಣ, ದಿನ ಭತ್ಯೆ ನೀಡಲಾಗುವುದು.ಈ ಕುರಿತು ಅಯ್ಕೆ ಮಾನದಂಡ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆ ಮಂಡಳಿ ಅಂತರ್ಜಾಲ ವಿಳಾಸ www.hkrdb.kar.nic.in ವೀಕ್ಷಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular