HomeKarnatakaBREAKING : ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಆಗಸ್ಟ್, ಸೆಪ್ಟೆಂಬರ್ ತಿಂಗಳ...

BREAKING : ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಆಗಸ್ಟ್, ಸೆಪ್ಟೆಂಬರ್ ತಿಂಗಳ ಗೌರವಧನ ಬಿಡುಗಡೆ

ಬೆಂಗಳೂರು : ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಗೌರವಧನ ಪಾವತಿಸಲು ಸರ್ಕಾರ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಇಲಾಖಾ ವ್ಯಾಪ್ತಿಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2022-23ನೇ ಸಾಲಿಗೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಆಗಸ್ಟ್-2023 ಮತ್ತು ಸೆಪ್ಟೆಂಬರ್-2023ರ ಮಾಹೆಗಳ ಗೌರವಧನವನ್ನು ಪಾವತಿಸಲು ಹಾಗೂ ಹಿಂದಿನ ಮಾಹೆಗಳಿಗೆ ಕೊರತೆ ಆಗಿರುವ ಅನುದಾನವನ್ನು ಗೌರವಧನ ಪಾವತಿಸಲು ಒಟ್ಟು ರೂ 20,46,64,708/- (ಇಪ್ಪತ್ತು ಕೋಟಿ ನಲವತ್ತಾರು ಲಕ್ಷದ ಅರವತ್ತನಾಲ್ಕು ಸಾವಿರದ ಏಳುನೂರ ಎಂಟು ರೂಪಾಯಿಗಳು ಮಾತ್ರ) ಗಳ ಅನುದಾನವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳಿಗೆ ಬಿಡುಗಡೆಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಛೇರಿಯ ವೆಬ್-ಸೈಟ್ನಲ್ಲಿ ಪ್ರಕಟಿಸಿರುವ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿಭಾಗಿಸಿ 15/19 ಗಂಟೆಗಳ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರಿಗೆ ನೇಮಕಗೊಂಡಿರಬೇಕು. ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುವ ಉದ್ದೇಶದಿಂದ ಹೆಚ್ಚುವರಿ ವಿಭಾಗ ತೆರೆದು ಹೆಚ್ಚಿನ ಕಾರ್ಯಭಾರ ತೋರಿಸಿ ಅಥವಾ ಹೆಚ್ಚುವರಿ ಕಾರ್ಯಭಾರ ಲೆಕ್ಕಚಾರ ಮಾಡಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಗೌರವಧನ ಪಾವತಿಸಿದ್ದಲ್ಲಿ ಸಂಬಂಧಿಸಿದ ಪ್ರಾಂಶುಪಾಲರು ಮತ್ತು ಕಛೇರಿ ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಡುಗಡೆ ಆಗಿರುವ ಅನುದಾನದಲ್ಲಿ ಅಥವಾ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕಾಲೇಜಿನ ಹಂತದಲ್ಲಿ ಉಳಿಕ ಇದ್ದಲ್ಲಿ ಹಿಂದಿನ ಮಾಹಗಳ ಗೌರವಧನ ಪಾವತಿಸಲು ಕೊರತೆಯಾಗಿರುವ ಅನುದಾನದೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿಯಮಾನುಸಾರ ಗೌರವಧನ ಪಾವತಿಸಲು ಅನುಮತಿ ನೀಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular