ಬೆಂಗಳೂರು ನಗರ ಜಿಲ್ಲೆ : ಪಿಂಚಣಿ’ ಪಡೆದುಕೊಳ್ಳುವವರಿಗೆ ಮಹತ್ವದ ಮಾಹಿತಿ…..ಎನ್.ಪಿ.ಸಿ.ಐ ‘ಆಧಾರ್’ ಲಿಂಕ್ ಗೆ ಅ. 30 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳನ್ನು ನೇರ ಹಣ ಸಂದಾಯ ಯೋಜನೆಯಡಿ ತರುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳ ಬ್ಯಾಂಕ್ ಮತ್ತು ಪೋಸ್ಟ್ ಖಾತೆಗಳಲ್ಲಿ ಎನ್.ಪಿ.ಸಿ.ಐ ಲಿಂಕ್ ಮತ್ತು ಆಧಾರ್ ಜೋಡಣೆಯಾಗದೆ ಇರುವುದರಿಂದ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಸಂಬಂಧಪಟ್ಟ ತಮ್ಮ ಬ್ಯಾಂಕ್ ಗಳಿಗೆ , ಅಂಚೆ ಕಛೇರಿ, ನಾಡ ಕಛೇರಿ ಹಾಗೂ ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳನ್ನು ನೀಡಿ ಅಕ್ಟೋಬರ್ 25 ರೊಳಗೆ ಕಡ್ಡಾಯವಾಗಿ ಎನ್.ಪಿ.ಸಿ.ಐ ಮತ್ತು ಆಧಾರ್ ಸೀಡಿಂಗ್ ಮಾಡಿಸಬೇಕು ತಪ್ಪಿದಲ್ಲಿ ಸರ್ಕಾರವು ಕಾಲ ಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅರ್ಹ ಫಲಾನುಭವಿಗಳೆ ಜವಾಬ್ದಾರರಾಗಿರುತ್ತಾರೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟsಣೆಯಲ್ಲಿ ತಿಳಿಸಿದ್ದಾರೆ.