HomeKarnatakaMysore Dasara : ಅ.25 ರಂದು ಮೈಸೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

Mysore Dasara : ಅ.25 ರಂದು ಮೈಸೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಮೈಸೂರು : ದಸರಾ ಹಿನ್ನೆಲೆ ಅ.25 ರಂದು ಹೆಚ್ಚಿನ ಜನಸಂದಣಿ ಇರುವುದರಿಂದ ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಉಪನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ದಿನಾಂಕ: 24/10/2023 ರಂದು ಜಂಬುಸವಾರಿ ನಡೆಯಲಿದ್ದು ಹೆಚ್ಚಿನ ಜನಸಂಖ್ಯೆ ಇರುವುದರಿಂದ, ಹಾಗೂ ದಿನಾಂಕ: 25/10/2023 ರಂದು  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗದ ಕಾರಣ, ಆ ದಿನವನ್ನು ದಸರಾ ಪ್ರಯುಕ್ತ ಒಂದು ದಿನ ವಿಶೇಷ ರಜೆ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿರುತ್ತಾರೆ.

ಸದರಿಯವರ ಮನವಿಯನ್ವಯ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಮೈಸೂರು ರವರ ಉಲ್ಲೇಖಿತ (3) ರ ಟಿಪ್ಪಣಿ ಆದೇಶದಂತೆ ದಿನಾಂಕ: 25/10/2023ರಂದು ಮೈಸೂರು ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಿ ಗೆ ನಾಡಹಬ್ಬ ದಸರಾ-2023ರ ಪ್ರಯುಕ್ತ ಒಂದು ದಿನದ ವಿಶೇಷ ರಜೆ ಎಂದು ಘೋಷಿಸಿದೆ. ಹಾಗೂ ಸದರಿ ದಿನವನ್ನು ದಿನಾಂಕ: 04/11/2023ರ ಶನಿವಾರದಂದು ಪೂರ್ಣ ತರಗತಿ ನಡೆಸಿ ಸರಿದೂಗಿಸಿಕೊಳ್ಳುವಂತೆ ಸೂಚಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular