ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ರಾತ್ರಿ ವೇಳೆ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡಲಿದೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ ಹೇಳಿದೆ.
ರಾತ್ರಿ ಸಮಯ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಮುಖ ಮಾರ್ಗಸೂಚಿಗಳು ಇಲ್ಲಿದೆ :
ರಾತ್ರಿ ವೇಳೆ ಮೌನ ಕಾಯ್ದುಕೊಳ್ಳಬೇಕು. ರಾತ್ರಿ 10 ಗಂಟೆ ಬಳಿಕ ರೈಲಿನಲ್ಲಿ ಪ್ರಯಾಣಿಸುವವರಿಗೆ ಈ ನಿಯಮ ಅನ್ವಯಯವಾಗುತ್ತದೆ. ಸಹ ಪ್ರಯಾಣಿಕರಿಗೆ ತೊಂದರೆಯಾಗುವಷ್ಟರ ಮಟ್ಟಿಗೆ ಜೋರಾಗಿ ಮಾತನಾಡುವಂತಿಲ್ಲ.
ಜೋರಾಗಿ ಸಂಗೀತ ಕೇಳಲು ಅನುಮತಿ ಇರೋದಿಲ್ಲ. ರಾತ್ರಿ 10 ಗಂಟೆ ಬಳಿಕವೂ ಸಂಗೀತ ಕೇಳಲು ಇಚ್ಛಿಸಿದರೆ ಕಡ್ಡಾಯವಾಗಿ ಇಯರ್ ಫೋನ್ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಧೂಮಪಾನ ಅಥವಾ ಮದ್ಯಪಾನ ಮಾಡುವಂತಿಲ್ಲ.
ರಾತ್ರಿ 10 ಗಂಟೆ ಬಳಿಕ ಪ್ರಯಾಣಿಕರು ಕಡ್ಡಾಯವಾಗಿ ಲೈಟ್ ಆಫ್ ಮಾಡಬೇಕು. ಲೈಟ್ ಆನ್ ಇದ್ದರೆ ಮಲಗುವವರಿಗೆ ತೊಂದರೆ ಆಗುತ್ತದೆ ಎಂದು ಈ ನಿಯಮ ಅಳವಡಿಸಲಾಗಿದೆ.
ರಾತ್ರಿ 10 ಗಂಟೆ ಬಳಿಕ ಆಹಾರ ಸೇವೆ ಲಭ್ಯವಿರೋದಿಲ್ಲ. ಆದರೆ ಪ್ರಯಾಣಿಕರು ಇ ಕ್ಯಾಟರಿಂಗ್ ಸೇವೆ ಮೂಲಕ ಊಟ ಅಥವಾ ಉಪಹಾರಗಳನ್ನು ಮೊದಲೇ ಆರ್ಡರ್ ಮಾಡಬಹುದಾಗಿದೆ.