ಅರಿಶಿಣ ಅತ್ಯುತ್ತಮ ಆಂಟಿ ಬಯೋಟಿಕ್ ಎಂಬುದು ಪ್ರಪಂಚಕ್ಕೆ ತಿಳಿದ ವಿಷಯ. ಪೂಜೆಗೆ, ಸೌಂದರ್ಯ ವರ್ಧಕವಾಗಿ, ಅಡುಗೆಗೆ ಉಪಯೋಗಕ್ಕೆ ಬರುವ ಅರಿಶಿಣ ಗಾಯವನ್ನು ಒಣಗಿಸುವ ಶಮನಕಾರಿ ಗುಣವನ್ನೂ ಹೊಂದಿದೆ.
ಅರಿಶಿಣ ಅಗಾಧ ಪ್ರಮಾಣದ ಸತ್ವಗಳನ್ನು ಹೊಂದಿದೆ. ಇದರ ಹಸಿ ಚಟ್ನಿ ಒಮ್ಮೆ ತಯಾರಿಸಿ, ಸವಿದು ನೋಡಿ, ಆರೋಗ್ಯದ ಲಾಭ ಪಡೆಯಿರಿ.
ಹಸಿ ಅರಿಶಿನದ ಬೇರು/ ಕೊಂಬು – 100 ಗ್ರಾಂ
ಜೀರಿಗೆ – 1 ಚಮಚ
ಕಾಳುಮೆಣಸು – 1 1/2 ಚಮಚ
ಕಾಯಿತುರಿ – ಸ್ವಲ್ಪ
ಬೆಲ್ಲ – ಗೋಲಿ ಗಾತ್ರ
ಹುಣಸೇ ಹಣ್ಣು – ಎರಡು ಎಸಳು
ಅರಿಶಿಣದ ಬೇರನ್ನು ಸ್ವಲ್ಪ ಜಜ್ಜಿ ಅಥವಾ ತುರಿದುಕೊಳ್ಳಿ. ಜೀರಿಗೆ, ಕಾಳು ಮೆಣಸನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಈಗ ಎಲ್ಲಾ ಪದಾರ್ಥವನ್ನು ಚಟ್ನಿಯ ಹದಕ್ಕೆ ರುಬ್ಬಿ, ಒಗ್ಗರಣೆ ಕೊಟ್ಟು, ಬಿಸಿ ಬಿಸಿ ಅನ್ನದ ಜೊತೆ ತಿನ್ನಿ.