HomeBusinessBIG NEWS: 7 ದೇಶಗಳಿಗೆ 10 ಲಕ್ಷ ಟನ್ ಗಿಂತ ಹೆಚ್ಚು ಅಕ್ಕಿ ರಫ್ತಿಗೆ ಅನುಮತಿ:...

BIG NEWS: 7 ದೇಶಗಳಿಗೆ 10 ಲಕ್ಷ ಟನ್ ಗಿಂತ ಹೆಚ್ಚು ಅಕ್ಕಿ ರಫ್ತಿಗೆ ಅನುಮತಿ: ಅಕ್ಕಿ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ 7 ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರ ಬುಧವಾರ ಹೇಳಿದೆ.

ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್(NCEL) ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ(DGFT) ಅಧಿಸೂಚನೆಯಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಜುಲೈ 20 ರಂದು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತುಗಳನ್ನು ನಿಷೇಧಿಸಲಾಗಿದೆಯಾದರೂ, ಕೆಲವು ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ವಿನಂತಿಯ ಮೇರೆಗೆ ಸರ್ಕಾರವು ನೀಡಿದ ಅನುಮತಿಯ ಆಧಾರದ ಮೇಲೆ ರಫ್ತುಗಳನ್ನು ಅನುಮತಿಸಲಾಗಿದೆ.

ನೇಪಾಳ, ಕ್ಯಾಮರೂನ್, ಕೋಟ್ ಡಿ’ ಐವೋರ್, ಗಿನಿಯಾ, ಮಲೇಷಿಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್‌ ಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಸೂಚಿಸಲಾಗಿದೆ.

ನೇಪಾಳಕ್ಕೆ ಸೂಚಿಸಲಾದ ಪ್ರಮಾಣವು 95,000 ಟನ್‌ಗಳು, ಕ್ಯಾಮರೂನ್(1,90,000 ಟನ್‌ಗಳು), ಕೋಟ್ ಡಿ ಐವೊರ್(1,42,000 ಟನ್‌ಗಳು), ಗಿನಿಯಾ(1,42,000 ಟನ್‌ಗಳು), ಮಲೇಷ್ಯಾ(1,70,000 ಟನ್‌ಗಳು), ಫಿಲಿಪೈನ್ಸ್(2,95, 000 ಟನ್‌ಗಳು ), ಮತ್ತು ಸೀಶೆಲ್ಸ್ (800 ಟನ್).

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular