ಆಯುಷ್ಮಾನ್ ಬಂಪರ್ ಡ್ರಾ: 1 ಲಕ್ಷ ರೂ. ಗೆಲ್ಲಲು ಅವಕಾಶ

ಪಂಜಾಬ್ ಸ್ಟೇಟ್ ಹೆಲ್ತ್ ಏಜೆನ್ಸಿಯು ವಿಶೇಷ ದೀಪಾವಳಿ ಬಂಪರ್ ಡ್ರಾ ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಅ.ರ್ 16 ರಿಂದ ನವೆಂಬರ್ 30 ರವರೆಗೆ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿ ಸೆಹತ್ ಬಿಮಾ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಳ್ಳುವ ಯಾರಾದರೂ 1 ಲಕ್ಷ ರೂ.ವರೆಗೆ ಬಹುಮಾನವನ್ನು ಗೆಲ್ಲುವ ಅವಕಾಶ ಇದೆ.

ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಬಲ್ಬೀರ್ ಸಿಂಗ್ ಅವರ ನಿರ್ದೇಶನದ ಮೇರೆಗೆ ಈ ಉಪಕ್ರಮ ತೆಗೆದುಕೊಳ್ಳಲಾಗಿದೆ. ಪಂಜಾಬ್‌ನ ಗರಿಷ್ಠ ಸಂಖ್ಯೆಯ ಜನರನ್ನು ಆರೋಗ್ಯ ವಿಮಾ ರಕ್ಷಣೆಯ ಅಡಿಯಲ್ಲಿ ನೋಂದಾಯಿಸುವ ಗುರಿ ಹೊಂದಿದೆ.

ಡ್ರಾದ ವಿವರಗಳನ್ನು ಬಹಿರಂಗಪಡಿಸಿದ ಜಿಲ್ಲಾ ವೈದ್ಯಕೀಯ ಆಯುಕ್ತ(ಡಿಎಂಸಿ) ಡಾ ಅಮರ್‌ಜೀತ್ ಕೌರ್, 10 ಅದೃಷ್ಟಶಾಲಿಗಳನ್ನು ಯಾದೃಚ್ಛಿಕ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ಮತ್ತು ಮೊದಲ ಬಹುಮಾನ 1 ಲಕ್ಷ ರೂ., ಎರಡನೇ ಬಹುಮಾನ 50,000 ರೂ., 25000 ರೂ. ಮೂರನೇ ಬಹುಮಾನ ನೀಡಲಾಗುವುದು. ಅದೇ ರೀತಿ ನಾಲ್ಕನೇ ಬಹುಮಾನ 10,000 ರೂ. ಮತ್ತು 5ನೇ ಬಹುಮಾನ 8000 ರೂ., 6 -10 ನೇ ಬಹುಮಾನ ತಲಾ 5000 ರೂ. ನೀಡಲಾಗುವುದು. ಡ್ರಾ ಡಿಸೆಂಬರ್ 4 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ಫಲಾನುಭವಿಗಳು “ಆಯುಷ್ಮಾನ್ ಆ್ಯಪ್” ಅನ್ನು ಬಳಸಿಕೊಂಡು ತಮ್ಮ ಕಾರ್ಡ್‌ಗಳನ್ನು ಸುಲಭವಾಗಿ ಪಡೆಯಬಹುದು. “beneficiary.nha.gov.in” ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಅವರ ಹತ್ತಿರದ ಆಶಾ ಕಾರ್ಯಕರ್ತೆ ಅಥವಾ ಎಂಪನೆಲ್ಡ್ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು.

ಈ ಯೋಜನೆಯು ರಾಜ್ಯಾದ್ಯಂತ 800 ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತದೆ. ರಾಜ್ಯದ 44 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿವೆ, ಇದು ಮೊಣಕಾಲು ಬದಲಿ, ಹೃದಯ ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ಚಿಕಿತ್ಸೆಗಳು ಸೇರಿದಂತೆ ಸುಮಾರು 1600 ವಿಧದ ಚಿಕಿತ್ಸೆಗಳಿಗೆ ಪ್ರವೇಶವನ್ನು ನೀಡುತ್ತದೆ. ಈ ಫಲಾನುಭವಿ ಕುಟುಂಬಗಳು NFSA ರೇಷನ್ ಕಾರ್ಡ್ ಹೊಂದಿರುವವರು, J-ಫಾರ್ಮ್ ಹೊಂದಿರುವ ರೈತರನ್ನು ಒಳಗೊಂಡಿದೆ. ನೋಂದಾಯಿತ ಕಾರ್ಮಿಕರು, ನೋಂದಾಯಿತ ಸಣ್ಣ ವ್ಯಾಪಾರಿಗಳು, ಮಾನ್ಯತೆ ಪಡೆದ ಮತ್ತು ಹಳದಿ ಕಾರ್ಡ್ ಹೊಂದಿರುವ ಪತ್ರಕರ್ತರು ಮತ್ತು ಕುಟುಂಬಗಳು 2011 ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ದತ್ತಾಂಶದ ಅಡಿಯಲ್ಲಿ ಒಳಗೊಳ್ಳುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read