ಬೆಂಗಳೂರು : ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು.
ಈ ಯೋಜನೆಯಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ(ನೀ), ಕಡಲೆ(ನೀ/ಮ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ(ಶೇಂಗಾ)(ನೀ), ಭತ್ತ(ನೀ), ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಮುಸುಕಿನ ಜೋಳ(ನೀ), ಜೋಳ(ಮ), ಹುರುಳಿ(ಮ), ಸೂರ್ಯಕಾಂತಿ(ನೀ/ಮ) ಕುಸುಮೆ(ಮ), ಈರುಳ್ಳಿ(ನೀ), ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ(ನೀ) ,ಈರುಳ್ಳಿ(ನೀ) ಬೆಳೆಗಳಾಗಿವೆ.
ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕ ಇಂತಿವೆ: ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ(ನೀ)-ಡಿ.30, ಜೋಳ(ಮ)-ನ.15, ಮುಸುಕಿನ ಜೋಳ(ನೀ)-ಡಿ.15, ಕಡಲೆ(ನೀ/ಮ)-ಡಿ.30, ಹುರುಳಿ(ಮ)-ಡಿ.01, ಸೂರ್ಯಕಾಂತಿ(ನೀ/ಮ)-ಡಿ.15, ಕುಸುಮೆ(ಮ)-ಡಿ.15, ಈರುಳ್ಳಿ(ನೀ)-ಡಿ.01, ಬೇಸಿಗೆ ಬೆಳೆಗಳಾದ ಭತ್ತ(ನೀ)-2024 ಫೆ.28, ನೆಲಗಡಲೆ(ಶೇಂಗಾ)(ನೀ)-2024 ಫೆ.28, ಸೂರ್ಯಕಾಂತಿ(ನೀ)-2024 ಫೆ.28 ಮತ್ತು ಈರುಳ್ಳಿ(ನೀ)-2024 ಫೆ.28.
ಈ ಮೇಲ್ಕಂಡ ದಿನಾಂಕಗಳಂದು ಮುಕ್ತಾಯಗೊಳ್ಳಲಿದ್ದು, ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.