HomeKarnatakaತನ್ನ ಸ್ನೇಹಿತರೊಂದಿಗೆ ಖಾಸಗಿ ಕ್ಷಣ ಕಳೆಯುವಂತೆ ಗಂಡನಿಂದ ಹೆಂಡತಿಗೆ ಒತ್ತಾಯ; ಪತಿಯ ವಿಕೃತಿಗೆ ಬೇಸತ್ತು ಪೊಲೀಸ್...

ತನ್ನ ಸ್ನೇಹಿತರೊಂದಿಗೆ ಖಾಸಗಿ ಕ್ಷಣ ಕಳೆಯುವಂತೆ ಗಂಡನಿಂದ ಹೆಂಡತಿಗೆ ಒತ್ತಾಯ; ಪತಿಯ ವಿಕೃತಿಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ತನ್ನ ಗೆಳೆಯರ ಜೊತೆ ಖಾಸಗಿ ಕ್ಷಣಗಳನ್ನು ಕಳೆಯುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ವಿಕೃತ ಪತಿಯ ವರ್ತನೆಗೆ ಬೇಸತ್ತ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಮೂಲದ ಪತಿ ಮಹಾಶಯನ ಕಿರುಕುಳದಿಂದ ನೊಂದ ಪತ್ನಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಂಗಳೂರು ಮೂಲದ ಸುಧೀರ್ ಪೈ, ಪತ್ನಿಗೆ ತನ್ನ ಸ್ನೇಹಿತರ ಜೊತೆ ಮಲಗುವಂತೆ ಒತ್ತಾಯಿಸುತ್ತಿದ್ದನಂತೆ. ಇದನ್ನು ನಿರಾಕರಿಸಿದ್ದಕ್ಕೆ ಪತ್ನಿ ಮೇಲೆ ಸುಧೀರ್ ಪೈ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಆತನ ಮೊಬೈಲ್ ನಲ್ಲಿಯೂ ಅನೇಕ ಅಶ್ಲೀಲ ಮೆಸೇಜ್, ಲೈಂಗಿಕ ಕಾರ್ಯಕರ್ತೆಯರ ಬೆಲೆ ಬಗ್ಗೆ ಚಾಟ್ ಗಳು ಇದ್ದವಂತೆ. ಗಂಡನ ಇಂತಹ ವರ್ತನೆಯನ್ನು ಪ್ರಶ್ನಿಸಿದ್ದಕ್ಕೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದ. ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದ ಎಂದು ದೂರು ನೀಡಿದ್ದಾರೆ. ಪತಿಯ ವಿಕೃತಿ, ದೈಹಿಕ ಹಿಂಸೆಗೆ ಬೇಸತ್ತ ಪತ್ನಿ ಸುಧೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular