HomeKarnatakaಗಮನಿಸಿ : 'E-KYC' ಮಾಡುವುದು ಬಹಳ ಸುಲಭ, ಜಸ್ಟ್ ಹೀಗೆ ಮಾಡಿ..!

ಗಮನಿಸಿ : ‘E-KYC’ ಮಾಡುವುದು ಬಹಳ ಸುಲಭ, ಜಸ್ಟ್ ಹೀಗೆ ಮಾಡಿ..!

ಗೃಹಲಕ್ಷ್ಮಿ ಯೋಜನೆ, ಕಿಸಾನ್ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗೆ ಪಡಿತರ ಹಣ ಬರಬೇಕೆಂದರೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ E-KYC ಆಗಿರಲೇಬೇಕು, ಇ – ಕೆವೈಸಿ (E-KYC) ಮಾಡಿಸಿದರೆ ಮಾತ್ರ ಹಣ ಬರುತ್ತದೆ. ಹಾಗಾದರೆ E-KYC ಮಾಡಿಸುವುದು ಹೇಗೆ ಇಲ್ಲಿದೆ ಮಾಹಿತಿ.

ಮೊದಲಿಗೆ, ಗ್ರಾಹಕರು ತಮ್ಮ ಬ್ಯಾಂಕಿನ ಅಧಿಕೃತ ಪೋರ್ಟಲ್ ಅನ್ನು ತೆರೆಯಬೇಕು ಮತ್ತು ಲಾಗ್ ಇನ್ ಮಾಡಬೇಕು. ಅದರ ನಂತರ, ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

– ಸೂಚನೆಗಳನ್ನು ಅನುಸರಿಸಿ ಮತ್ತು ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ.
– ಆಧಾರ್, ಪ್ಯಾನ್ ಮತ್ತು ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಂತರ ಅಪ್ಲೋಡ್ ಮಾಡಬೇಕು. ಈ ದಾಖಲೆಗಳನ್ನು ಎರಡೂ ಬದಿಗಳಲ್ಲಿ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ.
– ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ. ಕೆವೈಸಿ ನವೀಕರಣ ಮಾಹಿತಿಯನ್ನು ನಂತರ ಗ್ರಾಹಕರಿಗೆ ಸಂದೇಶ ಅಥವಾ ಮೇಲ್ ಮೂಲಕ ತಿಳಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯಾಯಬೆಲೆ ಅಂಗಡಿಯಲ್ಲಿ ನೀವು ಬ್ಯಾಂಕ್ ಖಾತೆಗೆ ಆಧಾರ್ ಕೂಡ ಲಿಂಕ್ ಮಾಡಿಸಿಕೊಳ್ಳಬಹುದು. ಇದಕ್ಕೆ ಬೇಕಾಗುವ ದಾಖಲೆಗಳು.

1) ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
2)ಕುಟುಂಬದ ಸದಸ್ಯರ ಭಾವಚಿತ್ರ
3)ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ಮತ್ತು ಬಯೋಮೆಟ್ರಿಕ್
4)ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದಾದರೆ ಪಾಸ್ ಬುಕ್ ವಿವರ ಬೇಕಾಗುತ್ತದೆ.

KYC ಅನ್ನು ನವೀಕರಿಸದಿದ್ದರೆ ಏನು ಮಾಡಬೇಕು?

ಗ್ರಾಹಕರು ಕೆವೈಸಿ ವಿವರಗಳನ್ನು ನವೀಕರಿಸದಿದ್ದರೆ, ಬ್ಯಾಂಕ್ ಅವರ ವಹಿವಾಟಿನ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು. ಅಥವಾ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು. ಕೆಲವು ಸಂದರ್ಭಗಳಲ್ಲಿ ಖಾತೆಯನ್ನು ಮುಚ್ಚುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ, ಕೆಲವು ಹಣಕಾಸು ಮತ್ತು ಹಣಕಾಸುಯೇತರ ಚಟುವಟಿಕೆಗಳಿಗೆ ಬ್ಯಾಂಕ್ ಖಾತೆಯನ್ನು ಬಳಸಲಾಗುವುದಿಲ್ಲ. ಆದಾಗ್ಯೂ, ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಬ್ಯಾಂಕ್ ಸಂಬಂಧಪಟ್ಟ ಗ್ರಾಹಕರಿಗೆ ಮುಂಚಿತವಾಗಿ ತಿಳಿಸುತ್ತದೆ.
ಇ-ಕೆವೈಸಿ ಮಾಡದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಸೌಲಭ್ಯ ನೀಡದಿರಲು ಆಹಾರ ಇಲಾಖೆ ನಿರ್ಧರಿಸಿದೆ ಅಂತಹ ಸದಸ್ಯಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular