HomeEntertainment'ವಸಂತ ಕಾಲದ ಹೂಗಳು' ಚಿತ್ರದ ''ನೆನಪಿನ ಬುತ್ತಿ'' ಹಾಡು ರಿಲೀಸ್

‘ವಸಂತ ಕಾಲದ ಹೂಗಳು’ ಚಿತ್ರದ ”ನೆನಪಿನ ಬುತ್ತಿ” ಹಾಡು ರಿಲೀಸ್

ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತ ಕಾಲದ ಹೂಗಳು’ ಚಿತ್ರದ ‘ನೆನಪಿನ ಬುತ್ತಿ’ ಎಂಬ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಪ್ರಥಮ್ ಭಟ್ ಅವರ ಗಾಯನವಿದ್ದು, ಭರತ್ ಜನಾರ್ದನ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ ಸಚಿನ್ ಶೆಟ್ಟಿ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಯದುವಂಶಿ ಫಿಲಂಸ್ ಬ್ಯಾನರ್ ನಡಿ ಅಶೋಕ್ ರಾಥೋಡ್ ಹಾಗೂ ಸಿದ್ದು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಚಿನ್ ರಾಥೋಡ್ ಮತ್ತು ರಾಧಾ ಭಾಗವತಿ ಪ್ರಮುಖ ಪಾತ್ರದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನುಳಿದಂತೆ ರಮೇಶ್ ರಾಯ್, ಗುರುರಾಜ್ ಶೆಟ್ಟಿ, ಪವನ್ ಭಾರದ್ವಾಜ್, ಆದರ್ಶ ರಂಗಾಯಣ, ನಂದೀಶ್ ಬಣ್ಣ ಹಚ್ಚಿದ್ದಾರೆ. ಶಿವಶಂಕರ್ ಛಾಯಾಗ್ರಹಣವಿದ್ದು, ಕೆಂಪರಾಜು ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular