HomeEntertainment'ಭಾವಪೂರ್ಣ' ಚಿತ್ರದ ಹಾಡಿಗೆ ಗಾನಪ್ರಿಯರು ಫಿದಾ

‘ಭಾವಪೂರ್ಣ’ ಚಿತ್ರದ ಹಾಡಿಗೆ ಗಾನಪ್ರಿಯರು ಫಿದಾ

ನಿನ್ನೆಯಷ್ಟೆ ‘ಭಾವಪೂರ್ಣ’ ಸಿನಿಮಾದ ‘ತಂದಾನಿ ತಂದಾನೀನೋ’ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಎಂ.ಡಿ. ಪಲ್ಲವಿ ಕಂಠಕ್ಕೆ ಸಂಗೀತಪ್ರಿಯರು ಮನಸೋತಿದ್ದಾರೆ. ವಿ. ಮನೋಹರ್ ಅವರ ಸಂಗೀತ ಧನರಾಜ್ ಸಾಹಿತ್ಯ ಎಲ್ಲವೂ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ.

ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಚೇತನ್ ಮುಂಡಾಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಿ ಎಲ್ ಮೋಶನ್ ಪಿಚ್ಚರ್ ಬ್ಯಾನರ್ ನಡಿ ಪ್ರಶಾಂತ್ ಅಂಜನಪ್ಪ ನಿರ್ಮಾಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಮೇಶ್ ಪಂಡಿತ್, ಮಂಜುನಾಥ್ ಹೆಗಡೆ, ಶಿವಾಜಿ ರಾವ್ ಜಾದವ್, ಅಥರ್ವ ಪ್ರಕಾಶ್, ಮಂಗಳ, ಧರ್ಮೇಂದ್ರ ಅರಸ್, ಚೇತನ್ ರಾಯ್ ತೆರೆ ಹಂಚಿಕೊಂಡಿದ್ದಾರೆ. ಸುಂದರ್ ವೀಣಾ ಡೈಲಾಗ್ ಬರೆದಿದ್ದು, ಕೀರ್ತಿರಾಜ್ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular