HomeKarnatakaದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ : ಖಾಸಗಿ ಬಸ್...

ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ : ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು

ಬೆಂಗಳೂರು : ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾಗಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿವೆ.

ಹೌದು, ದಸರಾ  ರಜೆಗೆ ಊರಿಗೆ ಹೋರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದು, ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್​ಗಳ ದರ ದುಪ್ಪಟ್ಟಾಗಿದೆ. ಅ.21ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದು, ಟಿಕೆಟ್ ದರ ಕೇಳಿ ಪ್ರಯಾಣಿಕರು ಶಾಕ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು-ಶಿವಮೊಗ್ಗಕ್ಕೆ 1150-1400 ರೂ. ಬೆಂಗಳೂರು- ಹುಬ್ಬಳಿ 600-850 ರೂ. ಬೆಂಗಳೂರು-ಮಂಗಳೂರು  1600-2000 ರೂ.ಬೆಂಗಳೂರು – ಉಡುಪಿ 1600-1900 ರೂ. ಬೆಂಗಳೂರು-ಬೆಳಗಾವಿ 1500-2100ಗೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular