HomeIndiaBIG NEWS: ಹಾಸ್ಟೇಲ್ ನಲ್ಲೇ ಆತ್ಮಹತ್ಯೆಗೆ ಶರಣಾದ MBBS ವಿದ್ಯಾರ್ಥಿನಿ

BIG NEWS: ಹಾಸ್ಟೇಲ್ ನಲ್ಲೇ ಆತ್ಮಹತ್ಯೆಗೆ ಶರಣಾದ MBBS ವಿದ್ಯಾರ್ಥಿನಿ

ಪ್ರಯಾಗ್ ರಾಜ್: ಮೋತಿ ಲಾಲ್ ನೆಹರು ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.

ಶ್ರುತಿ ಶ್ರೀವಾಸ್ತವ್ ಮೃತ ವಿದ್ಯಾರ್ಥಿನಿ. ಹಾಸ್ಟೇಲ್ ಕೊಠಡಿಯಲ್ಲಿಯೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರುತಿ ಶ್ರೀವಾಸ್ತವ್ ಮೋತಿ ಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಳು. ಹಾಸ್ಟೇಲ್ ಕೊಠಡಿಯಲ್ಲಿ ವಿದ್ಯಾರ್ಥಿನಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಎಂಬಿಬಿಎಸ್ ಗಾಗಿ ಶ್ರುತಿ 2020ರಲ್ಲಿ ಪ್ರಯಾಗ್ ರಾಜ್ ಗೆ ಬಂದಿದ್ದಳು. ಮೂಲತಃ ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯವಳು. ವಿದ್ಯಾರ್ಥಿನಿ ತಂದೆ ಲಖನೌದಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿ ನಿನ್ನೆ ಕೊಂಚ ಬೇಸರದಲ್ಲಿ ಇದ್ದಳು. ಹಾಸ್ಟೇಲ್ ಗೆ ಬಂದ ವಿದ್ಯಾರ್ಥಿನಿ ತನ್ನ ರೂಮಿನ ಬಾಗಿಲು ಹಾಕಿಕೊಂಡವಳು ಮತ್ತೆ ತೆರೆದಿಲ್ಲ. ಕರೆ ಮಾಡಿದೂ ಫೋನ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಆಕೆಯ ಸ್ನೇಹಿತರು ಹಾಸ್ಟೇಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿನಿಯ ಹಾಸ್ಟೇಲ್ ರೂಮ್ ನ ಕೊಠಡಿಯಲ್ಲಿ ಇಣುಕಿ ನೋಡಿದಾಗ ಆಕೆ ನೇಣಿಗೆ ಕೊರಳೊಡ್ಡಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿನಿ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular