ಬೆಂಗಳೂರು : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 1:1 ರಡಿ ಪೋಷಕರ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿ ಆಯ್ಕೆಯಾಗಿರುವ ವಿವಾಹಿತ ಮಹಿಳೆಯರ ವಿವರ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
2022ರ ಪಧವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ದಿನಾಂಕ: 08/03/2023 ರ 1:1 ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಇತರೆ ಹಿಂದುಳಿದ ವರ್ಗದ ವಿವಾಹಿತ ಮಹಿಳೆಯ ಆಯ್ಕೆಯನ್ನು ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನ (ದಿನಾಂಕ: 12/10/2023) ಹಿನ್ನಲೆಯಲ್ಲಿ ಪರಿಶೀಲಿಸಬೇಕಾಗಿರುತ್ತದೆ. ಈ ಕುರಿತಂತೆ ನಡೆದ ಜೂಮ್ ಮೀಟಿಂಗ್ನಲ್ಲಿ ಮಾನ್ಯ ಆಯುಕ್ತರು ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ಸೂಚನೆ ನೀಡಿರುವುದನ್ನು ಸ್ಮರಿಸಿದೆ. ಅದ್ದರಿಂದ, ಈ ಪತ್ರದೊಂದಿಗೆ ಲಗತ್ತಿಸಲಾದ ಎಕ್ಸೆಲ್ ಶೀಟ್ನಲ್ಲಿ ದಿನಾಂಕ: 16/10/2023ರ ಅಪರಾಹ್ನ 4,00 ಗಂಟೆಯೊಳಗಾಗಿ ಇ-ಮೇಲ್ ಮೂಲಕ ಸಲ್ಲಿಸಲು ತಿಳಿಸಿದೆ.