
ಮೃತ ಬಾಲಕನನ್ನುಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್ (7) ಎಂದು ಗುರುತಿಸಲಾಗಿದೆ. ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿ ವೈಶಾಲಿಗೂ ನೀಡಿದ್ದಾನೆ. ಪರಿಣಾಮ ಕೂಡಲೇ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ.
ಘಟನೆಯಲ್ಲಿ ತಂದೆ-ಮಗಳು ಆಸ್ಪತ್ರೆ ಸೇರಿದರೆ ಏನೂ ಅರಿಯದ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೃತಪಟ್ಟ ಬಾಲಕ ವೇದೇಶ್ ದೇಹದ ಮೇಲೆ ಗುಳ್ಳೆಗಳಾಗಿದ್ದವು, ಇದಕ್ಕೆ ಗ್ರಾಮದ ಸತ್ಯನಾರಾಯಣ ಎಂಬಾತ ಔಷಧಿ ನೀಡಿದ್ದನು ಎಂದು ಹೇಳಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

