‘ಬಿಜೆಪಿಯಿಂದ ಇನ್ನೂ 8-10 ಜನ ಕಾಂಗ್ರೆಸ್ ಗೆ ಬರಬಹುದು’ : ಜಗದೀಶ್ ಶೆಟ್ಟರ್ ಸ್ಪೋಟಕ ಹೇಳಿಕೆ

ಬೆಂಗಳೂರು : ಬಿಜೆಪಿಯಿಂದ ಇನ್ನೂ 8-10 ಜನ ಕಾಂಗ್ರೆಸ್ ಗೆ ಬರಬಹುದು ಎಂದು ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್ ಕೆಲವರು ನನ್ನ ಸಂಪರ್ಕದಲ್ಲಿದ್ದಾರೆ, ಆದರೆ ಎಷ್ಟು ಜನ ಎಂದು ಹೇಳಲ್ಲ. ಬಿಜೆಪಿಯಿಂದ ಅಸಮಾಧಾನಗೊಂಡವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಾವು ಯಾರನ್ನೂ ಕೂಡ ಒತ್ತಾಯ ಮಾಡಲ್ಲ, ಅವರೇ ಸ್ವಇಚ್ಚೆಯಿಂದ ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬುದು ಭ್ರಮೆ. ಬಿಜೆಪಿಯವರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ ಎಂದರು.

ಬಿಜೆಪಿಯಿಂದ ಇನ್ನೂ ಸುಮಾರು 8-10 ಜನ ಕಾಂಗ್ರೆಸ್ ಗೆ ಬರಬಹುದು, ಈಗಾಗಲೇ ಅವರು ನನ್ನ ಬಳಿ ಬಂದಿದ್ದಾರೆ. ಈ ವಿಚಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೇನೆ ಎಂದು ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read