alex Certify 13 ಸಾವಿರ ರೂ.ಗೆ ಹಳೆ ಕಲಾಕೃತಿ ಮಾರಿದ ದಂಪತಿ; ನಿಜಬೆಲೆ 36 ಕೋಟಿ ರೂ. ಎಂದು ತಿಳಿದಾಗ ಪರಿಹಾರಕ್ಕಾಗಿ ಕೇಸ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13 ಸಾವಿರ ರೂ.ಗೆ ಹಳೆ ಕಲಾಕೃತಿ ಮಾರಿದ ದಂಪತಿ; ನಿಜಬೆಲೆ 36 ಕೋಟಿ ರೂ. ಎಂದು ತಿಳಿದಾಗ ಪರಿಹಾರಕ್ಕಾಗಿ ಕೇಸ್ !

The mask dates back to the 19th century.

ಫ್ರೆಂಚ್ ನ್ಯಾಯಾಲಯ ವ್ಯವಸ್ಥೆಯು ಒಂದು ವಿಶಿಷ್ಟವಾದ ಕಾನೂನು ಪ್ರಕರಣಕ್ಕೆ ಸಾಕ್ಷಿಯಾಗಿದೆ. ದಂಪತಿ ಹಳೆಯ ಕಲಾಕೃತಿಯೊಂದನ್ನು ಸ್ಥಳೀಯ ಆಂಟಿಕ್ ಡೀಲರ್ ಗೆ ಮಾರಿದ್ದು ಅದರ ನಿಜವಾದ ಬೆಲೆ ತಿಳಿದ ನಂತರ ಪರಿಹಾರ ಹಣವನ್ನು ವಿತರಕನಿಂದ ಕೊಡಿಸಬೇಕೆಂದು ಪ್ರಕರಣ ದಾಖಲಿದ್ದಾರೆ.

ಕಲಾಕೃತಿಯ ನೈಜ ಮೌಲ್ಯವನ್ನು ಅರಿತುಕೊಂಡ ನಂತರ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಕ್ಕಾಗಿ ಯಾರಾದರೂ ಪರಿಹಾರವನ್ನು ಪಡೆಯಬಹುದೇ ಎಂಬ ಪ್ರಶ್ನೆ ಈ ಪ್ರಕರಣ ಹುಟ್ಟುಹಾಕಿದೆ. ಹೆಸರಿಸದ ಫ್ರೆಂಚ್ ದಂಪತಿಯಾದ 81 ವರ್ಷದ ಮಹಿಳೆ ಮತ್ತು ಅವರ 88 ವರ್ಷದ ಪತಿ ತಮ್ಮ ಮನೆಯೊಂದನ್ನು ಸ್ವಚ್ಛಗೊಳಿಸುತ್ತಿದ್ದಾಗ ತುಂಬಾ ಹಳೆಯದಾದ ಆಫ್ರಿಕನ್ ಮುಖವಾಡದಂತಹ ಕಲಾಕೃತಿಯೊಂದು ಅವರಿಗೆ ಸಿಕ್ಕಿತು.

ವಿಭಿನ್ನವಾಗಿದ್ದ ಆ ಮುಖವಾಡವನ್ನು ಆಂಟಿಕ್ ಡೀಲರ್ ಗೆ ಮಾರಿ ಉತ್ತಮ ಬೆಲೆ ಪಡೆಯಬೇಕೆಂದು ದಂಪತಿ ನಿರ್ಧರಿಸಿದರು. ಅದರಂತೆ ಮಾತುಕತೆ ಬಳಿಕ ಸ್ಥಳೀಯ ವ್ಯಾಪಾರಿ ಸೆಪ್ಟೆಂಬರ್ 2021 ರಲ್ಲಿ ಮಾಸ್ಕ್ ಅನ್ನು €150 ಅಥವಾ ಸುಮಾರು $157 (ಅಂದಾಜು ರೂ. 13,000) ಕ್ಕೆ ಖರೀದಿಸಲು ಒಪ್ಪಿಕೊಂಡರು.

ಕೆಲವು ತಿಂಗಳುಗಳ ನಂತರ ಮಾಂಟ್‌ಪೆಲ್ಲಿಯರ್‌ನಲ್ಲಿ ನಡೆದ ಹರಾಜಿನಲ್ಲಿ ಅವರು ನಿಷ್ಪ್ರಯೋಜಕವೆಂದು ಭಾವಿಸಿದ ಆಫ್ರಿಕನ್ ಮಾಸ್ಕ್ ಅನ್ನು € 4.2 ಮಿಲಿಯನ್ ಅಥವಾ $4.4 ಮಿಲಿಯನ್ (36 ಕೋಟಿ ರೂ.) ಗೆ ಮಾರಾಟ ಮಾಡಲಾಗಿದೆ ಎಂದು ದಂಪತಿ ಪತ್ರಿಕೆಯೊಂದರಲ್ಲಿ ಓದಿ ತಿಳಿದುಕೊಂಡರು. ಆ ಮುಖವಾಡವು ಫಾಂಗ್ ಮಾಸ್ಕ್ ಎಂಬ ಅಪರೂಪದ ವಸ್ತುವಾಗಿದೆ ಎಂದು ಗೊತ್ತಾಯಿತು. ಲಭ್ಯವಿರುವ ಮಾಹಿತಿಯ ಪ್ರಕಾರ, ಇದನ್ನು ಆಫ್ರಿಕನ್ ರಹಸ್ಯ ಸಮಾಜದಲ್ಲಿ ಆಚರಣೆಗಳು ಮತ್ತು ಶುದ್ಧೀಕರಣ ವಿಧಿಗಳಲ್ಲಿ ಬಳಸಲಾಗುತ್ತಿತ್ತು.

ದಂಪತಿಗಳು ತಾವು ಮೋಸ ಹೋಗಿದ್ದೇವೆ ಎಂದು ತಿಳಿದ ನಂತರ ಆಂಟಿಕ್ ಡೀಲರ್ ವಿರುದ್ಧ ಮೊಕದ್ದಮೆ ಹೂಡಿ ಹೆಚ್ಚಿನ ಹಣ ನೀಡಬೇಕೆಂದು ಕೇಳಿದ್ದಾರೆ. ಜೂನ್ 28 ರಂದು ಫ್ರೆಂಚ್ ನ್ಯಾಯಾಲಯವು ವ್ಯಾಪಾರಿಯ ವಿರುದ್ಧ ದಂಪತಿಗಳು ದಾಖಲಿಸಿದ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡು ಮುಖವಾಡದ ಮಾರಾಟವನ್ನು ಸ್ಥಗಿತಗೊಳಿಸಿದೆ. ವರದಿಗಳ ಪ್ರಕಾರ ದಂಪತಿಗಳು ತಮ್ಮಿಂದ ವಸ್ತುವನ್ನು ಖರೀದಿಸಿದಾಗ ಅದರ ನಿಜವಾದ ಮೌಲ್ಯದ ಬಗ್ಗೆ ವಿತರಕರಿಗೆ ಈಗಾಗಲೇ ಗೊತ್ತಿದ್ದರೂ, ನಮಗೆ ಕಡಿಮೆ ಮೊತ್ತ ನೀಡಿದ್ದಾರೆಂದು ಆರೋಪಿಸಿದ್ದಾರೆ.

ವರದಿಯ ಪ್ರಕಾರ ಮಾಸ್ಕ್ ಖರೀದಿಸಿದ ನಂತರ ಡೀಲರ್ ಅದನ್ನು ತನ್ನ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಡದೇ, ಬದಲಿಗೆ ಹರಾಜು ಮಾಡುವವರೊದಿಗೆ ಸಂಪರ್ಕ ಹೊಂದಿದ್ದು ಹೆಚ್ಚಿನ ಹಣ ಪಡೆದಿದ್ದರು. ಆದಾಗ್ಯೂ ಕಾರ್ಬನ್-14 ಡೇಟಿಂಗ್ ಮೂಲಕ ವಿಶ್ಲೇಷಣೆ ಮಾಡಿದ ನಂತರ ಮುಖವಾಡವು 19 ನೇ ಶತಮಾನದಷ್ಟು ಹಿಂದಿನದು ಎಂದು ತಿಳಿದುಬಂದಿದೆ.

ಈ ಕಲಾಕೃತಿಯು ಅತ್ಯಂತ ಅಪರೂಪವಾಗಿದೆ ಮತ್ತು ಅದರ ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚಿನ ಮಾದರಿಗಳು ಕೆಲವು ಪಾಶ್ಚಿಮಾತ್ಯ ವಸ್ತುಸಂಗ್ರಹಾಲಯಗಳು ಮತ್ತು ಸಂಗ್ರಹಗಳಲ್ಲಿ ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...