HomeIndia'ರಾಹುಲ್ ಗಾಂಧಿ' ಇನ್ನೂ ಯಾಕೆ ಮದ್ವೆ ಆಗಿಲ್ಲ? : ಕೊನೆಗೂ ಗುಟ್ಟು ಬಿಚ್ಚಿಟ್ಟ ರಾಗಾ

‘ರಾಹುಲ್ ಗಾಂಧಿ’ ಇನ್ನೂ ಯಾಕೆ ಮದ್ವೆ ಆಗಿಲ್ಲ? : ಕೊನೆಗೂ ಗುಟ್ಟು ಬಿಚ್ಚಿಟ್ಟ ರಾಗಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ತಮ್ಮ ಮದುವೆಯ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿಭಾಗವಹಿಸಿದರು. ಈ ವೇಳೆ ಅವರು ಚರ್ಮದ ಆರೈಕೆ, ಆಹಾರ ಪದ್ಧತಿ ಮತ್ತು ಮದುವೆಯ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಸೆಪ್ಟೆಂಬರ್ 23 ರಂದು ನಡೆದ ಈ ಕಾರ್ಯಕ್ರಮದ ವೀಡಿಯೊವನ್ನು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ಜಾತಿ ಗಣತಿ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ, ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸೇರಿದಂತೆ ತಮ್ಮ ಇಷ್ಟಾನಿಷ್ಟಗಳ ಬಗ್ಗೆ ಅವರು ಅನೇಕ ವಿಷಯಗಳನ್ನು ಹಂಚಿಕೊಂಡರು.

ಮದುವೆಯ ಬಗ್ಗೆ ಯಾಕೆ ಯೋಚಿಸಲಿಲ್ಲ..?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವು ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ. ನೀವು ಇನ್ನೂ ಮದುವೆಯಾಗುವ ಬಗ್ಗೆ ಏಕೆ ಯೋಚಿಸಲಿಲ್ಲ?” ಎಂದು ವಿದ್ಯಾರ್ಥಿನಿಯೊಬ್ಬರು ರಾಹುಲ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಮದುವೆಯ ಆಲೋಚನೆ ಹೋಗಲಿಲ್ಲ ಎಂದು ಉತ್ತರಿಸಿದರು.

ಕ್ರೀಮ್ ಎಂದಿಗೂ ಬಳಸಿಲ್ಲ

ರಾಹುಲ್ ಗಾಂಧಿ ಅವರ ನೆಚ್ಚಿನ ಆಹಾರ ಯಾವುದು ಎಂದು ಕೇಳಿದಾಗ? ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲಾ ತರಕಾರಿಗಳನ್ನು ತಿನ್ನುತ್ತೇನೆ ಎಂದು ಅವರು ಉತ್ತರಿಸಿದರು. ಇನ್ನೊಬ್ಬರು ನೀವು ಮುಖಕ್ಕೆ ಯಾವ ಕ್ರೀಮ್ ಬಳಸುತ್ತೀರಿ ಎಂದು ಕೇಳಿದರು. ಅವರು ಇಲ್ಲಿಯವರೆಗೆ ತಮ್ಮ ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಸಾಬೂನನ್ನು ಬಳಸಿಲ್ಲ ಮತ್ತು ಮುಖವನ್ನು ನೀರಿನಿಂದ ತೊಳೆಯುತ್ತೇನೆ ಎಂದು ಉತ್ತರಿಸಿದರು.
ಅಂತೆಯೇ, ರಾಹುಲ್ ಗಾಂಧಿ ಅವರು ಕಾಲಕಾಲಕ್ಕೆ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular