alex Certify ನಿಮಗೆ ಗೊತ್ತಾ ‘OK’ ಎಂಬುದರ ಅರ್ಥ ? ಇಲ್ಲಿದೆ ಇಂಟ್ರಸ್ಟಿಂಗ್ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಗೊತ್ತಾ ‘OK’ ಎಂಬುದರ ಅರ್ಥ ? ಇಲ್ಲಿದೆ ಇಂಟ್ರಸ್ಟಿಂಗ್ ವಿವರ

ನಾವು ನಮ್ಮ ದೈನಂದಿನ ಜೀವನದಲ್ಲಿ ಸಂಭಾಷಣೆ ವೇಳೆ ಅಥವಾ ಉತ್ತರಿಸುವಾಗ ಕೆಲವು ಸಾಮಾನ್ಯ ಪದಗಳನ್ನು ಉಪಯೋಗಿಸುತ್ತೇವೆ. ಹು, ಸರಿ, ಆಯ್ತು, ಓಕೆ ಅಂತೆಲ್ಲಾ ನಮ್ಮ ಸಂಭಾಷಣೆಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ಬಹಳಷ್ಟು ಪದಗಳನ್ನು ಬಳಸುತ್ತೇವೆ. ಆದರೆ ಅವುಗಳ ನಿಜವಾದ ಅರ್ಥವನ್ನು ನಾವು ತಿಳಿದಿರುವುದಿಲ್ಲ. ನಾವು ಬಳಸುವ OK ಪದವು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸುವ ಪದಗಳಲ್ಲಿ ಒಂದಾಗಿದೆ. ಸರಿ ಅಂತ ಹೇಳುವಾಗಲೆಲ್ಲಾ ಸರಳವಾಗಿ OK ಎನ್ನುತ್ತೇವೆ. ಹಾಗಾದರೆ ಈ OK ಎಂದರೇನು? ಇದೊಂದು ಪದವೇ ಎಂದು ತಿಳಿಯಲು ಪ್ರಯತ್ನಿಸಿದಾಗ, OK ಸರಿ ಎಂಬುದು ಒಂದು ಪದವಲ್ಲ. ಅದು ಎರಡು ಪದಗಳ ಚಿಕ್ಕ ರೂಪವಾಗಿದೆ. ಹಾಗಾದರೆ ಆ ಎರಡು ಪದಗಳು ಯಾವುವು ಗೊತ್ತಾ ? OK ಪೂರ್ಣ ರೂಪ Olla Kalla ಅಥವಾ Oll Korrect. Oll Korrect ಎಂದರೆ ಗ್ರೀಕ್ ಭಾಷೆಯಲ್ಲಿ ಎಲ್ಲಾ ಸರಿ. ಈ ಪದದ ಮೂಲದ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಇದು 1830 ರ ದಶಕದಲ್ಲಿ ಬೋಸ್ಟನ್‌ನಿಂದ ಬಂದಿದೆ ಎಂದು ಹೇಳಲಾಗುತ್ತದೆ ಮತ್ತು ಇದನ್ನು ಭಾಷಾಶಾಸ್ತ್ರಜ್ಞ ಅಲೆನ್ ವಾಕರ್ ರೀಡ್ 1960 ರ ದಶಕದಲ್ಲಿ ವಿವರಿಸಿದರು.

ಅಂತೆಯೇ ಸಾಮಾನ್ಯವಾಗಿ ಬಳಸಲಾಗುವ ಇತರ ಸಂಕ್ಷಿಪ್ತ ರೂಪಗಳೆಂದರೆ – i.e ಅಂದರೆ e.g. ಈ ಎರಡೂ ಮೂಲದವು ಲ್ಯಾಟಿನ್ ಮೂಲದವು. i.e ನ ಪೂರ್ಣ ರೂಪವು id est ಆಗಿದೆ, ಇದರರ್ಥ ಲ್ಯಾಟಿನ್‌ನಲ್ಲಿ “ಅದು” ( That Is) ಮತ್ತು e.g. ಎಂದರೆ exempli gratia. ಉದಾಹರಣೆ ಎಂದರ್ಥ.

ಅದೇ ರೀತಿಯಲ್ಲಿ ಪ್ರತಿಯೊಬ್ಬರೂ ಹಣಕಾಸಿನ ವಹಿವಾಟುಗಳಲ್ಲಿ PIN ಅನ್ನು ಬಳಸುತ್ತಾರೆ. ಇದು ವೈಯಕ್ತಿಕ ಗುರುತಿನ ಸಂಖ್ಯೆ ( Personal Identification Number) ಯನ್ನು ಸೂಚಿಸುತ್ತದೆ. ಇದು ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳಂತಹ ಪಾವತಿ ಕಾರ್ಡ್‌ಗಳೊಂದಿಗೆ ಗ್ರಾಹಕರಿಗೆ ನೀಡಲಾಗುವ ಕೋಡ್ ಆಗಿದೆ. ಇದು ಬಳಕೆದಾರರಿಗೆ ಆನ್‌ಲೈನ್ ಅಥವಾ ಎಲೆಕ್ಟ್ರಾನಿಕ್ ವಹಿವಾಟಿನ ಪ್ರಕ್ರಿಯೆಯನ್ನು ಸುರಕ್ಷಿತಗೊಳಿಸುತ್ತದೆ. ಅದರ ಹೊರತಾಗಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್ ಟಾಪ್‌ಗಳಂತಹ ಸಾಧನಗಳಲ್ಲಿ ಪಿನ್‌ಗಳನ್ನು ಸಹ ಬಳಸಲಾಗುತ್ತದೆ.

ನಾವೆಲ್ಲರೂ ಸ್ಕೂಬಾ ಡೈವಿಂಗ್ ಬಗ್ಗೆ ಕೇಳಿದ್ದೇವೆ. ಆದರೆ ಇದು ವಾಸ್ತವವಾಗಿ ಒಂದು ಸಂಕ್ಷೇಪಣವಾಗಿದೆ ಎಂದು ನಿಮಗೆ ತಿಳಿದಿದೆಯೇ? SCUBA ಎಂದರೆ Self-contained Underwater Breathing Apparatus (ಸ್ವಯಂ-ಒಳಗೊಂಡಿರುವ ನೀರೊಳಗಿನ ಉಸಿರಾಟದ ಉಪಕರಣ) . ಇದನ್ನು ಡಾ ಕ್ರಿಶ್ಚಿಯನ್ ಲ್ಯಾಂಬರ್ಟ್ಸೆನ್ ಅವರು 1954 ರಲ್ಲಿ ನೀಡಿದರು. ಇದು ಅವರ ಹಳೆಯ ಆವಿಷ್ಕಾರವಾದ LARU ಗೆ ಹೊಸ ಹೆಸರಾಗಿದೆ. LARU ಎಂದರೆ Lambertsen Amphibious Respiratory Unit.

ಇದರೊಂದಿಗೆ YOLO (You Only Live Once), BRB (Be Right Back), LOL (Laugh Out Loud) ನಂತಹ ಅನೇಕ ಪದಗಳಿವೆ ಇವುಗಳನ್ನು ಸಂದೇಶ ಅಥವಾ ಸಂಭಾಷಣೆಗಳ ಸಮಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...