HomeKarnatakaBIG NEWS : 'ಮಹಿಷ ದಸರಾ', 'ಚಾಮುಂಡಿ ಬೆಟ್ಟ' ಚಲೋಗೆ ಇನ್ನೂ ಅನುಮತಿ ನೀಡಿಲ್ಲ :...

BIG NEWS : ‘ಮಹಿಷ ದಸರಾ’, ‘ಚಾಮುಂಡಿ ಬೆಟ್ಟ’ ಚಲೋಗೆ ಇನ್ನೂ ಅನುಮತಿ ನೀಡಿಲ್ಲ : ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸ್ಪಷ್ಟನೆ

Permission sought for Mahisha Dasaraಮೈಸೂರು : ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನೀಡಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಬಿ ರಮೇಶ್ ಸ್ಪಷ್ಟನೆ ನೀಡಿದ್ದಾರೆ.

ಮಹಿಷ ದಸರಾ ಆಚರಣೆಗೆ ಮತ್ತು ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನೀಡುವಂತೆ ಎರಡೂ ಕಡೆಯವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಇದೀಗ ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಿಸಿದ್ದಾರೆ.

ಅನುಮತಿಗಾಗಿ ಎರಡೂ ಕಡೆಯವರು ನಮಗೆ ಮನವಿ ಸಲ್ಲಿಸಿದ್ದರು . ಮಹಿಷ ದಸರಾಗೆ ಪುಷ್ಪಾರ್ಚನೆಗೆ ಅವಕಾಶ ಅನುಮತಿ ಕೋರಿದ್ದರು. ಇನ್ನು 5000 ಮಂದಿ ಮೆರವಣಿಗೆ ನಡೆಸಲು ಚಾಮುಂಡಿ ಬೆಟ್ಟ ಚಲೋಗೆ ಕೂಡ ಅನುಮತಿ ಕೇಳಿದ್ದಾರೆ. ದಸರಾ ಉದ್ಘಾಟನೆ ಇರುವ ಕಾರಣ ನಾವು ಅನುಮತಿ ನೀಡಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ ರಮೇಶ್ ಸ್ಪಷ್ಟನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಅರಮನೆ ನಗರಿ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಈ ನಡುವೆ ವಿರೋಧದ ನಡುವೆಯೇ ಮಹಿಷ ದಸರಾ ಆಚಣೆ ಸಮಿತಿ ಮಹಿಷ ದಸರಾ ಆಚರಿಸಲು ತಯಾರಿ ನಡೆಸಿದೆ. ಭಕ್ತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿ ಮಹಿಷ ದಸರಾ ಆಚರಿಸದಂತೆ ಒತ್ತಾಯಿಸಿದ್ದಾರೆ. ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಮಹಿಷ ದಸರಾ ಆಚರಿಸಲು ನಿರ್ಧರಿಸಿದೆ. ಈ ನಡುವೆ ಮಹಿಷ ದಸರಾ ಆಚರಣೆಗೆ ತಡೆ ನಿಡುವಂತೆ ಸ್ನೇಹಮಯಿ ಕೃಷ್ಣ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅ.11ರಂದು ಅರ್ಜಿ ವಿಚಾರಣೆ ನಡೆಯಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular