ಮಡಿಕೇರಿ: ಕೊಡಗು ಜಿಲ್ಲೆಯ ಶಾಲೆಗಳಿಗೆ ದಸರಾ ರಜೆ ದಿನದಲ್ಲಿ ಮಾರ್ಪಾಡು ಮಾಡಲಾಗಿದೆ. ಕೊಡಗು ಜಿಲ್ಲಾಡಳಿತ ಅಕ್ಟೋಬರ್ 25 ರವರೆಗೆ ರಜೆ ನೀಡಿದೆ.
ಈ ಹಿಂದೆ ಅಕ್ಟೋಬರ್ 10 ರಿಂದ 24ರ ವರೆಗೆ ದಸರಾ ರಜೆ ನೀಡಲಾಗಿತ್ತು. ಅಕ್ಟೋಬರ್ 24ರಂದು ರಾತ್ರಿ ಮಡಿಕೇರಿ, ಗೋಣಿಕೊಪ್ಪಲುವಿನಲ್ಲಿ ದಸರಾ ಆಚರಣೆ ಹಿನ್ನೆಲೆಯಲ್ಲಿ ದಸರಾ ಆಚರಣೆಯ ಮರು ದಿನವೂ ಕೊಡಗು ಜಿಲ್ಲಾಡಳಿತ ಶಾಲೆಗಳಿಗೆ ರಜೆ ನೀಡಿದೆ.
ಅಕ್ಟೋಬರ್ 26 ರಿಂದ ಕೊಡಗು ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭಗೊಳ್ಳಲಿದೆ ಎಂದು ಹೇಳಲಾಗಿದೆ.