HomeInternational80 ವರ್ಷದ ವೃದ್ದೆಯನ್ನು ಮದುವೆಯಾಗಿದ್ದ 26 ವರ್ಷದ ಯುವಕನಿಂದ ತಮ್ಮಿಬ್ಬರ ಪ್ರೀತಿ ಕುರಿತು ಭಾವುಕ ಪೋಸ್ಟ್‌...

80 ವರ್ಷದ ವೃದ್ದೆಯನ್ನು ಮದುವೆಯಾಗಿದ್ದ 26 ವರ್ಷದ ಯುವಕನಿಂದ ತಮ್ಮಿಬ್ಬರ ಪ್ರೀತಿ ಕುರಿತು ಭಾವುಕ ಪೋಸ್ಟ್‌ !

26-Year-Old US Man, Married To Woman In Her 80s, Talks About Their Sex Life

ಆ ದಂಪತಿಯ ನಡುವೆ ಬರೋಬ್ಬರಿ 53 ವರ್ಷಗಳ ಅಂತರವಿದೆ. ಆತ 26 ವರ್ಷದ ಯುವಕನಾದರೆ ಅವನ ಪತ್ನಿಗೆ 80 ವರ್ಷ. ಎಲ್ಲರ ಹುಬ್ಬೇರಿಸುವಂತಹ ಈ ಜೋಡಿಯ ಹೆಸರು ಗ್ಯಾರಿ ಹಾರ್ಡ್ ವಿಕ್ ಮತ್ತು ಅಲ್ಮೆಡಾ. ತೀವ್ರ ಗಮನ ಸೆಳೆದಿರುವ ಈ ಪ್ರೇಮಕಥೆ ಶುರುವಾಗಿದ್ದೇ ಅಲ್ಮೆಡಾ ಅವರ ಹಿರಿಯ ಮಗನ ಅಂತ್ಯಕ್ರಿಯೆಯ ವೇಳೆ.

ಅಲ್ಮೆಡಾರ ಹಿರಿಯ ಮಗನ ಅಂತ್ಯಕ್ರಿಯೆಯಲ್ಲಿ ಭೇಟಿಯಾದ ಕೆಲವೇ ವಾರಗಳಲ್ಲಿ ತನ್ನ ಸ್ನೇಹಿತನ ತಾಯಿಯೊಂದಿಗೆ ಗ್ಯಾರಿ ಹಾರ್ಡ್‌ವಿಕ್ ಮದುವೆಯಾಗಿದ್ದ. ಇದೀಗ ತನ್ನ ಹೆಂಡತಿ ಅಲ್ಮೆಡಾರ 80 ವರ್ಷದ ಹುಟ್ಟುಹಬ್ಬದ ವೇಳೆ ಆತ ಪ್ರೀತಿಯ ಪೋಸ್ಟ್ ಮಾಡಿದ್ದು ಮತ್ತೆ ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೆನ್ನೆಸ್ಸಿಯ 26 ವರ್ಷದ ಗ್ಯಾರಿ ಹಾರ್ಡ್‌ವಿಕ್, ವಾಲ್‌ಮಾರ್ಟ್‌ನಲ್ಲಿ ಕೆಲಸ ಮಾಡುವ ಅಲ್ಮೆಡಾ ಅವರೊಂದಿಗಿನ ಅಸಾಂಪ್ರದಾಯಿಕ ಪ್ರೀತಿಯನ್ನು ಆಕೆಯ 80 ನೇ ಹುಟ್ಟುಹಬ್ಬದ ಸಂಭ್ರಮದ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಹುಟ್ಟುಹಬ್ಬದ ಸಂದೇಶದಲ್ಲಿ, ಗ್ಯಾರಿ ಅವರು ಅಲ್ಮೆಡಾ ಅವರನ್ನು ತಮ್ಮ ‘ಬೇಬಿಡಾಲ್’ ಮತ್ತು ‘ರಾಣಿ’ ಎಂದು ಪ್ರೀತಿಯಿಂದ ಉಲ್ಲೇಖಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆದಿದ್ದು ತಮ್ಮ ಅನನ್ಯ ಸಂಬಂಧದ ಮೇಲೆ ಬೆಳಕು ಚೆಲ್ಲಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಗ್ಯಾರಿ ಅಲ್ಮೆಡಾ ಅವರ ಚಿತ್ರವನ್ನು ಹಂಚಿಕೊಂಡಿದ್ದು, “ಜಗತ್ತಿನ ಅತ್ಯಂತ ಅದ್ಭುತ ಹೆಂಡತಿಗೆ ಜನ್ಮದಿನದ ಶುಭಾಶಯಗಳು. ಇಂದು ನಿಮ್ಮ ದಿನ ಮಾತ್ರವಲ್ಲ, ಮುಖ್ಯವಾಗಿ ಚಿನ್ನದಂತಹ ಹೃದಯವನ್ನು ಹೊಂದಿರುವ ಅದ್ಭುತ ಮಹಿಳೆಯ ಜನ್ಮ ದಿನಾಚರಣೆ. ನೀವು ಜಗತ್ತಿಗೆ ಅರ್ಹರು ಮತ್ತು ನನ್ನ ಕೊನೆಯ ಉಸಿರು ಇರುವವರೆಗೂ ನಿಮಗೆ ಬೇಕಾದ್ದನ್ನು ನೀಡಲು ನಾನು ಶ್ರಮಿಸುತ್ತೇನೆ. ನನ್ನ ಎಲ್ಲಾ ಸಂತೋಷದ ಕ್ಷಣಗಳು ನಾನು ನಿಮ್ಮೊಂದಿಗೆ ಹಂಚಿಕೊಳ್ಳುವ ಕ್ಷಣಗಳಾಗಿವೆ, ”ಎಂದು ಹೇಳಿದ್ದಾರೆ. ಇದರೊಂದಿಗೆ ಗ್ಯಾರಿ ತಮ್ಮನ್ನು ತುಂಬಾ ಅದೃಷ್ಟವಂತ ಗಂಡ ಎಂದು ಕರೆದುಕೊಂಡಿದ್ದಾರೆ.

ಗ್ಯಾರಿ 17 ವರ್ಷದವರಾಗಿದ್ದಾಗ ಅವರು 71 ವರ್ಷದವರಾಗಿದ್ದ ಅಲ್ಮೆಡಾ ಅವರನ್ನು ಅವರ ಮಗನ ಅಂತ್ಯಕ್ರಿಯೆಯಲ್ಲಿ ಭೇಟಿಯಾಗಿದ್ದರು. ಡೈಲಿ ಮೇಲ್ ಪ್ರಕಾರ ಗ್ಯಾರಿ ತಮ್ಮ ಲೈಂಗಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ತಮ್ಮ ನಡುವೆ ಉತ್ತಮವಾದ ಪ್ರೀತಿ ಮತ್ತು ಲೈಂಗಿಕ ಸಂಬಂಧವಿದೆ ಎಂದಿದ್ದಾರೆ. ಆದರೆ ಇವರ ಸಂಬಂಧವನ್ನು ಅಲ್ಮೆಡಾ ಅವರ ಮಗ ಸೇರಿದಂತೆ ಆಕೆಯ ಆರು ಮೊಮ್ಮಕ್ಕಳಲ್ಲಿ ಇಬ್ಬರು ಒಪ್ಪಿಕೊಂಡಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular