HomeKarnatakaHDK ಭವಿಷ್ಯ ನಿಜವಾದ್ರೆ ಅವರ ಭೇಟಿಗೆ ಅಪಾಯಿಂಟ್ ಮೆಂಟ್ ಪಡೆಯುತ್ತೇನೆ ಎಂದು ವ್ಯಂಗ್ಯವಾಡಿದ ಸಚಿವ ಎಂ.ಸಿ.ಸುಧಾಕರ್

HDK ಭವಿಷ್ಯ ನಿಜವಾದ್ರೆ ಅವರ ಭೇಟಿಗೆ ಅಪಾಯಿಂಟ್ ಮೆಂಟ್ ಪಡೆಯುತ್ತೇನೆ ಎಂದು ವ್ಯಂಗ್ಯವಾಡಿದ ಸಚಿವ ಎಂ.ಸಿ.ಸುಧಾಕರ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಾರು ತಿಂಗಳಲ್ಲಿ ಪತನವಾಗಲಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಹೆಚ್.ಡಿ.ಕೆ ಭ್ರಮನಿರಸನಗೊಂಡು ಹೇಳಿಕೆ ಕೊಡುತ್ತಿದ್ದಾರೆ. ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ. ನಾನೇ ಮುಖ್ಯಮಂತ್ರಿಯಾಗಿಬಿಡುತ್ತೇನೆ ಎಂದುಕೊಂಡಿದ್ದ ಅವರಿಗೆ ಹತಾಶೆಯಾಗಿದೆ. ಹಾಗಾಗಿ ಭ್ರಮನಿರಸನಗೊಂಡು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಸಚಿವ ಡಾ.ಎಂ.ಸಿ.ಸುಧಾಕರ್, ಕುಮಾರಸ್ವಾಮಿ ಹೇಳಿದ ಭವಿಷ್ಯ ನಿಜವಾದ್ರೆ ನಾನು ಅವರ ಭೇಟಿಗೆ ಅಪಾಯಿಂಟ್ ಮೆಂಟ್ ಪಡೆದುಕೊಳ್ಳುತ್ತೇನೆ ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೆಚ್.ಡಿ.ಕೆ ಅನುಭವಿ ರಾಜಕಾರಣಿ. ಈಗ ಭವಿಷ್ಯ ಹೇಳುವುದನ್ನು ಅಭ್ಯಾಸ ಮಾಡುತ್ತಿರಬೇಕು. ಹಾಗಾಗಿ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ್ದಾರೆ. ಹೆಚ್.ಡಿ.ಕೆ ಭವಿಷ್ಯ ನಿಜವಾದರೆ ಅವರ ಭೇಟಿಗೆ ಅಪಾಯಿಂಟ್ ಮೆಂಟ್ ಪಡೆಯುತ್ತೇನೆ. ಕುಮಾರಸ್ವಾಮಿ ಬಳಿ ನನ್ನ ಭವಿಷ್ಯ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular