HomeEntertainmentಇಂದು ʼವೇಷʼ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ವಿನೋದ್ ಪ್ರಭಾಕರ್

ಇಂದು ʼವೇಷʼ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ವಿನೋದ್ ಪ್ರಭಾಕರ್

ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ಕೃಷ್ಣ ನಡಪಾಲ್ ನಿರ್ದೇಶನದ ‘ವೇಷ’ ಸಿನಿಮಾದ ಟ್ರೈಲರ್ ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು, ಮರಿ ಟೈಗರ್ ವಿನೋದ್ ಪ್ರಭಾಕರ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ instagram ನಲ್ಲಿ ಹಂಚಿಕೊಂಡಿದೆ.

ರಾಘವೇಂದ್ರ ಡಿಜಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಾಘು, ನಿಧಿ, ಸೌಖ್ಯ ಗೌಡ, ಮಂಜು ಪಾವಗಡ, ವಾಣಿಶ್ರೀ, ಪ್ರಿಯಾಂಕ ಕಾಮತ್, ನೇಹಾ ಗೌಡ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಸುರೇಂದ್ರ ಅವರ ಸಂಕಲನವಿದ್ದು, ಉತ್ತಮ್ ಸಾರಂಗ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular