
ಸುತೀರ್ಥ ಮತ್ತು ಐಹಿಕಾ ಮೊದಲ ಗೇಮ್ ಅನ್ನು 11-7ರಿಂದ ಗೆದ್ದುಕೊಂಡರು, ಆದರೆ ಉತ್ತರ ಕೊರಿಯಾದ ಜೋಡಿ 7-11, 11-8, 7-11, 11-8, 11-9, 5-11, 11-2 ಸೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಜೋಡಿ ಚೀನಾದ ಮೆಂಗ್ ಚೆನ್ ಮತ್ತು ಯಿಡಿ ವಾಂಗ್ ಅವರನ್ನು ಸೋಲಿಸಿ ತಮ್ಮ ದೇಶಕ್ಕೆ ಪದಕವನ್ನು ಖಚಿತಪಡಿಸಿತು. ಈ ಜೋಡಿ 11-5, 11-5, 5-11 ಮತ್ತು 11-9 ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿತು. ಚೀನಾ ಜೋಡಿ ಹಾಲಿ ವಿಶ್ವ ಚಾಂಪಿಯನ್ ಆಗಿದೆ.

