HomeKarnatakaರಸ್ತೆ ದಾಟುತ್ತಿದ್ದಾಗ ಭೀಕರ ಅಪಘಾತ; KSRTC ಬಸ್ ಗೆ ಯುವಕ ಬಲಿ

ರಸ್ತೆ ದಾಟುತ್ತಿದ್ದಾಗ ಭೀಕರ ಅಪಘಾತ; KSRTC ಬಸ್ ಗೆ ಯುವಕ ಬಲಿ

ಮೈಸೂರು: ರಸ್ತೆ ದಾಟುವಾಗ ಎಚ್ಚರ ವಹಿಸಿದಷ್ಟೂ ಕಡಿಮೆಯೇ. ಕ್ಷಣಾರ್ಧದಲ್ಲಿ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆ ದಾಟುತ್ತಿದ್ದ ಯುವಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರಸ್ತೆ ದಾಟುತ್ತಿದ್ದಾಗಲೇ ವೇಗವಾಗಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಯುವಕ ಬಲಿಯಾಗಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡಿನ ಜೆ.ಎಸ್.ಎಸ್ ಪಾಲಿಟೆಕ್ನಿಕ್ ಕಾಲೇಜು ಬಳಿ ಈ ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಹನಗಳು ಬರುತ್ತಿಲ್ಲವೆಂದು ತಿಳಿದು ರಸ್ತೆ ದಾಟುತ್ತಿದ್ದ ಯುವಕನಿಗೆ ಕ್ಷಣಾರ್ಧದಲ್ಲಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಮುಬಾರಕ್ (28) ಮೃತ ದುರ್ದೈವಿ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular