HomeEntertainment'ಅರಸಯ್ಯನ ಪ್ರೇಮ ಪ್ರಸಂಗ' ಚಿತ್ರದ ಫಸ್ಟ್ ಲುಕ್ ರಿಲೀಸ್

‘ಅರಸಯ್ಯನ ಪ್ರೇಮ ಪ್ರಸಂಗ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ‘ಅರಸಯ್ಯನ ಪ್ರೇಮ ಪ್ರಸಂಗ’ ಎಂಬ ಹಾಸ್ಯಭರಿತ ಚಿತ್ರದ ಫಸ್ಟ್ ಲುಕ್ ಅನ್ನು ಇಂದು  ಬಿಡುಗಡೆ ಮಾಡಲಾಗಿದೆ. ನಟ ನಿರೂಪ್ ಭಂಡಾರಿ ಪೋಸ್ಟರ್ ಲಾಂಚ್ ಮಾಡುವ ಮೂಲಕ ಹೊಸ ಪ್ರತಿಭೆಗಳು ಸೇರಿ ಮಾಡಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಆರ್ ದೀಪು ನಿರ್ದೇಶನದ ಈ ಚಿತ್ರದಲ್ಲಿ ಮಹಾಂತೇಶ್ ಹಿರೇಮಠ, ರಶ್ಮಿತಾ ಗೌಡ ಹಾಗೂ ಸತೀಶ್ ಮುಖ್ಯ ಭೂಮಿಕೆಯಲ್ಲಿದ್ದು, ರಾಜ್ ಕಮಲ ಪಿಕ್ಚರ್ಸ್ ಬ್ಯಾನರ್ ನಡಿ ಶ್ರೀಮತಿ ಮೇಘಶ್ರೀ ರಾಜೇಶ್ ಬಂಡವಾಳ ಹೂಡಿದ್ದಾರೆ. ಗುರುಪ್ರಸಾದ್ ಛಾಯಾಗ್ರಾಹಣವಿದ್ದು, ಸುನಿಲ್ ಕಶ್ಯಪ್ ಸಂಕಲನವಿದೆ. ಇನ್ನುಳಿದಂತೆ ಪ್ರವೀಣ್ ಹಾಗೂ ಪ್ರದೀಪ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶೀಘ್ರದಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಈ ಪೋಸ್ಟರ್ ನಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular