HomeKarnatakaBIG NEWS : ಕಾವೇರಿ ಕಹಳೆ ಮೊಳಗಿಸಿದ ಸ್ಯಾಂಡಲ್ ವುಡ್ : ಪ್ರತಿಭಟನೆಗೆ ನಟ ದರ್ಶನ್...

BIG NEWS : ಕಾವೇರಿ ಕಹಳೆ ಮೊಳಗಿಸಿದ ಸ್ಯಾಂಡಲ್ ವುಡ್ : ಪ್ರತಿಭಟನೆಗೆ ನಟ ದರ್ಶನ್ ಸಾಥ್

ಬೆಂಗಳೂರು : ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿದ್ದು, ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟ ನಟಿಯರು ಧರಣಿಯಲ್ಲಿ ಭಾಗಿಯಾಗಿದ್ದಾರೆ.

ಕಾವೇರಿ ಹೋರಾಟಕ್ಕೆ ನಟ ದರ್ಶನ್, ಕಿಚ್ಚ ಸುದೀಪ್, ನಟ ಯಶ್ ಬರುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ ಇದೀಗ ನಟ ದರ್ಶನ್ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸ್ವಲ್ಪ ತಡವಾಗಿ ನಟ ದರ್ಶನ್ ಫಿಲ್ಮ್ ಚೇಂಬರ್ ಎದುರು ನಡೆಯುತ್ತಿರುವ ಧರಣಿಯಲ್ಲಿ ಭಾಗಿಯಾಗಿದ್ದಾರೆ.

ಕಾವೇರಿ ಹೋರಾಟದಲ್ಲಿ ಹಲವು ಸ್ಯಾಂಡಲ್ ವುಡ್ ನಟ ನಟಿಯರು ಭಾಗಿಯಾಗಿದ್ದಾರೆ. ನಟ ದುನಿಯಾ ವಿಜಯ್, ಶ್ರೀ ಮುರುಳಿ, ವಿಜಯ್ ರಾಘವೇಂದ್ರ, ನಾದಬ್ರಹ್ಮ ಹಂಸಲೇಖ, ನಿರ್ಮಾಪಕ ಚಿನ್ನೇಗೌಡ, ನಟಿ ಶೃತಿ, ಉಮಾಶ್ರೀ, ನಟಿ ಭಾವನಾ, ನಟಿ ಅನುಪ್ರಭಾಕರ್, ವಿನೋದ್ ಪ್ರಭಾಕರ್, ಧ್ರುವ ಸರ್ಜಾ, ಹಿರಿಯ ನಟ ಶ್ರೀನಿವಾಸ ಮೂರ್ತಿ ಮತ್ತಿತರರು ಭಾಗಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular