ಬಾಲಿವುಡ್ ನಟ ರಣಬೀರ್ ಕಪೂರ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಪೂರ್ ವಂಶದ ಕುಡಿ 2007ರಲ್ಲಿ ʼಸಾವರಿಯಾʼ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ರಣಬೀರ್ ಕಪೂರ್ ಸಾಲು ಸಾಲು ಸಿನಿಮಾಗಳನ್ನು ನೀಡುತ್ತಲೇ ಇದ್ದಾರೆ.
ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ನಟ ರಣಬೀರ್ ಕಪೂರ್, ತಮ್ಮ ವರ್ಜಿನಿಟಿ ಕುರಿತಂತೆ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದರು. ಈ ಸಂದರ್ಶನದಲ್ಲಿ ರಣಬೀರ್ ಕಪೂರ್ ತಮ್ಮ 15ನೇ ವರ್ಷ ಪ್ರಾಯದಲ್ಲಿ ತಮ್ಮ ವರ್ಜಿನಿಟಿ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನನಗೆ 15 ವರ್ಷ ಪ್ರಾಯವಿದ್ದಾಗಲೇ ನಾನು ನನ್ನ ವರ್ಜಿನಿಟಿ ಕಳೆದುಕೊಂಡೆ ಎಂದು ರಣಬೀರ್ ಕಪೂರ್ ಹೇಳುತ್ತಿರೋ ವಿಡಿಯೋ ವೈರಲ್ ಆದ ಬಳಿಕ ಅನೇಕರು ಇದಕ್ಕೆ ಟೀಕೆ ಮಾಡಿದ್ದರೆ ಇನ್ನೂ ಕೆಲವರು ಪ್ರಾಮಾಣಿಕವಾಗಿ ಧೈರ್ಯದಿಂದ ಸತ್ಯವನ್ನು ಒಪ್ಪಿಕೊಂಡ ರಣಬೀರ್ ಕಪೂರ್ರನ್ನು ಮೆಚ್ಚಿಕೊಂಡಿದ್ದಾರೆ.
ಪ್ರಸ್ತುತ ರಣಬೀರ್ ಕಪೂರ್ ಸಂದೀಪ್ ರೆಡ್ಡಿ ವಾಂಗಾ ನಿರ್ದೇಶನದ ಆನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.