HomeKarnatakaGruha Lakshmi Scheme : ಅರ್ಜಿ ಸಲ್ಲಿಸಿದ್ರೂ `ಗೃಹಲಕ್ಷ್ಮಿ' ಹಣ ಬಂದಿಲ್ವಾ? ತಪ್ಪದೇ ಈ ಕೆಲಸ...

Gruha Lakshmi Scheme : ಅರ್ಜಿ ಸಲ್ಲಿಸಿದ್ರೂ `ಗೃಹಲಕ್ಷ್ಮಿ’ ಹಣ ಬಂದಿಲ್ವಾ? ತಪ್ಪದೇ ಈ ಕೆಲಸ ಮಾಡಿ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಹಲವು ಫಲಾನುಭವಿಗಳ ಖಾತೆಗೆ 2,000 ರೂ. ಹಣ ವರ್ಗಾವಣೆ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಆಧಾರ್, ಬ್ಯಾಂಕ್ ಕೆವೈಸಿ ಮಾಡದೇ ಇರುವವರಿಗೆ ಗೃಹಲಕ್ಷ್ಮೀ ಹಣ ವರ್ಗಾವಣೆ ಆಗಿಲ್ಲ. ಹೀಗಾಗಿ ಫಲಾನುಭವಿ ಮಹಿಳೆಯರು ಕೂಡಲೇ ಈ ಕೆಲಸಗಳನ್ನು ಸಂಪೂರ್ಣ ಮಾಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಿಂದ ಕಾರ್ಡ್‌ದಾರರ ಮಾಹಿತಿಯನ್ನು ಆನ್‌ಲೈನ್‌ ಹಾಗೂ ಆಫ್ಲೈನ್‌ ವ್ಯವಸ್ಥೆಯಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ರೂಪಿಸಿರುವ ಕುಟುಂಬ ವೆಬ್‌ಸೈಟ್‌ಗೆ ನೀಡಲಾಗಿದೆ. ಇ-ಕೆವೈಸಿ ಮಾಡದ ಕಾರ್ಡ್‌ಗಳಿಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ ಹೀಗಾಗಿ ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ದಾಖಲೆಯನ್ನು ಕೊಟ್ಟು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.

ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್‌ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್‌ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular