ಆಧಾರ್ PVC ಕಾರ್ಡ್ ಎನ್ನುವುದು ಯುಐಡಿಎಐ ಪರಿಚಯಿಸಿದ ಒಂದು ರೀತಿಯ ಆಧಾರ್ ಕಾರ್ಡೇ ಆಗಿದೆ, ನೀವು ಮತ್ತೊಂದು ಆಧಾರ್ ಕಾರ್ಡ್ ಪಡೆಯುವ ಸಂದರ್ಭ ಬಂದಾಗ ಯುಐಎಡಿಐ ವೆಬ್ಸೈಟ್ನಲ್ಲಿ 50 ರೂಪಾಯಿ ಖರ್ಚು ಮಾಡಿ ಇದನ್ನು ಪಡೆಯಬಹುದಾಗಿದೆ. ಆಧಾರ್ ಕಾರ್ಡ್ ಕಳೆದು ಹೋದಲ್ಲಿ ಅಥವಾ ಹಾನಿಗೊಳಗಾದ ಸಂದರ್ಭದಲ್ಲಿ ಪಿವಿಸಿ ಕಾರ್ಡ್ ನಿಮ್ಮ ನೆರವಿಗೆ ಬರಲಿದೆ.
ಇ ಆಧಾರ್
eAadhaar ಆಧಾರ್‌ನ ಡಿಜಿಟಲ್ ಆವೃತ್ತಿಯಾಗಿದ್ದು, ಇದನ್ನು UIDAI ಡಿಜಿಟಲ್ ಮೋಡ್‌ಗಳ ಮೂಲಕ ಗುರುತಿಸಲಾಗುತ್ತದೆ ಇದು ಸುರಕ್ಷಿತ ಆಧಾರ್ ಕ್ಯೂಆರ್ ಕೋಡ್ ಅನ್ನು ಹೊಂದಿದ್ದು ಅದನ್ನು ಆಫ್‌ಲೈನ್ ಪರಿಶೀಲನೆಗಾಗಿಯೂ ಬಳಸಬಹುದು. eAadhaar ಅನ್ನು ಪಾಸ್‌ವರ್ಡ್‌ನಿಂದ ರಕ್ಷಿಸಿಕೊಳ್ಳಬಹುದಾಗಿದೆ. ಇ ಆಧಾರ್ ಡೌನ್‌ಲೋಡ್ ಮಾಡಲು ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಆಧಾರ್ ನ ಕೊನೆಯ 4 ಡಿಜಿಟ್ ಮಾತ್ರ ಕಾಣಲಿದೆ. ಇದನ್ನು ನೀವು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಎಂ ಆಧಾರ್
mAadhaar ಯುಐಡಿಎಐನಿಂದ ಗುರುತಿಸಲ್ಪಟ್ಟ ಅಧಿಕೃತ ಅಪ್ಲಿಕೇಶನ್ ಆಗಿದೆ, ವಿಶೇಷವಾಗಿ ಮೊಬೈಲ್ ಫೋನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಬಳಸಿ mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದು eAadhaar ನಂತಹ ಸುರಕ್ಷಿತ ಆಧಾರ್ QR ಕೋಡ್ ಅನ್ನು ಸಹ ಒಳಗೊಂಡಿದೆ ಮತ್ತು ಪ್ರತಿ ಹೊಸ ದಾಖಲಾತಿ ಅಥವಾ ಮಾಹಿತಿ ನವೀಕರಣದೊಂದಿಗೆ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.