ನೀವು ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕೊಮಾಕಿ ಡ್ಯುಯಲ್ ಬ್ಯಾಟರಿ ಎಲೆಕ್ಟ್ರಿಕ್ ಸ್ಕೂಟರ್ ಕೋಮಾಕಿ ಎಲ್ವೈ ತನ್ನ ಬೆಲೆಯನ್ನು ಕಡಿಮೆ ಮಾಡಿದೆ.
ಈ ಇ ಸ್ಕೂಟರ್ಗಳ ಬೆಲೆ 21 ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಿದೆ. ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ನೀವು ಡಬಲ್ ಬ್ಯಾಟರಿ ಪವರ್ ಹೊಂದಿರುವ ಇ ಸ್ಕೂಟರ್ನ ತಲಾಶ್ನಲ್ಲಿದ್ದರೆ Komaki LY ಉತ್ತಮ ಆಯ್ಕೆಯಾಗಿದೆ.
ಅಂದಹಾಗೆ ಈ ಇ ಸ್ಕೂಟರ್ನ ಕಡಿಮೆ ಬೆಲೆಯು ಸೀಮಿತ ಅವಧಿಗೆ ಮಾತ್ರ ಇರಲಿದೆ. ದೀಪಾವಳಿಯವರೆಗೆ ಮಾತ್ರ ನೀವು ಕಡಿಮೆ ಬೆಲೆಯ ಆಫರ್ನ ಲಾಭವನ್ನು ಪಡೆಯಬಹುದಾಗಿದೆ.
ಇಡೀ ದೇಶದಲ್ಲಿ ನಿಮಗೆ ಈ ಆಫರ್ ಲಭ್ಯವಿರಲಿದೆ. ಬೆಲೆಯನ್ನು ಕಡಿಮೆ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವುದು ಕಂಪನಿಯ ಉದ್ದೇಶವಾಗಿದೆ. ಪೆಟ್ರೋಲ್ ಬದಲಿಗೆ ಎಲೆಕ್ಟ್ರಿಕ್ ಸ್ಕೂಟರ್ ಬದಲಾವಣೆ ಮಾಡಬೇಕೆಂದುಕೊಂಡಿದ್ದರೆ ಇದು ಸರಿಯಾದ ಸಮಯವಾಗಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಎರಡು ಬ್ಯಾಟರಿಗಳೊಂದಿಗೆ ಬರುತ್ತದೆ. ನೀವು ಅವುಗಳನ್ನು ಹೊರಗೆ ತೆಗೆದುಕೊಂಡು ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು. ಪ್ರತಿ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. Komaki LY ನ TFT ಪರದೆಯು ಅನೇಕ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಆನ್ಬೋರ್ಡ್ ನ್ಯಾವಿಗೇಶನ್, ಸೌಂಡ್ ಸಿಸ್ಟಮ್, ಬ್ಲೂಟೂತ್, ಕರೆ ಮಾಡುವ ಆಯ್ಕೆ ಮತ್ತು ರೈಡ್-ಟು-ರೈಡ್ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
Komaki ಯ ಇ ಸ್ಕೂಟರ್ ಮೂರು ಗೇರ್ ವಿಧಾನಗಳಲ್ಲಿ ಬರುತ್ತದೆ – ಇಕೋ, ಸ್ಪೋರ್ಟ್ ಮತ್ತು ಟರ್ಬೊ. ಇದು ಎಲ್ಇಡಿ ಫ್ರಂಟ್ ವಿಂಕರ್ಗಳು, ಪಾರ್ಕಿಂಗ್ ಅಸಿಸ್ಟ್/ಕ್ರೂಸ್ ಕಂಟ್ರೋಲ್, ರಿವರ್ಸ್ ಅಸಿಸ್ಟ್ನಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್ನಲ್ಲಿ 200 ಕಿಲೋಮೀಟರ್ಗಳವರೆಗೆ ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 55-60 ಕಿ.ಮೀ. ಆಗಿದೆ ಎಂದು ಕಂಪನಿ ತಿಳಿಸಿದೆ.