Viral Video | ಮುರಿದು ಬಿದ್ದ ಸೇತುವೆ: ವಾಹನ ನೀರುಪಾಲು

ಗುಜರಾತ್​​ನ ಸುರೇಂದ್ರನಗರ ಜಿಲ್ಲೆಯ ವಸ್ತಾಡಿ ಪ್ರದೇಶದಲ್ಲಿದ್ದ ಹಳೆಯ ಸೇತುವೆ ಭಾನುವಾರ ಕುಸಿದು ಬಿದ್ದಿದ್ದು ಡಂಪರ್​ ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಅನೇಕ ವಾಹನಗಳು ನದಿಗೆ ಉರುಳಿ ಬಿದ್ದಿವೆ ಎನ್ನಲಾಗಿದೆ.

ವೇಗದ ಪ್ರವಾಹಕ್ಕೆ 10 ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಮಾಹಿತಿ ನೀಡಿವೆ. ಇದರಲ್ಲಿ ನಾಲ್ಕು ವ್ಯಕ್ತಿಗಳನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ಉಳಿದ ಆರು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಸಿ. ಸಂಪತ್​​, ರಾಷ್ಟ್ರೀಯ ಹೆದ್ದಾರಿಯನ್ನು ಜೋಡಿಸುವ ಈ ಸೇತುವೆಯನ್ನು ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿತ್ತು. ಈ ಹಿಂದೆಯೇ ಅಧಿಕಾರಿಗಳು ಈ ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಸೇತುವೆಯ ಮೇಲೆ ಡಂಪರ್​ ಚಲಿಸಿದ್ದೇ ಈ ಸೇತುವೆ ಕುಸಿತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಲ್ಲದೇ ಹೊಸ ಸೇತುವೆ ನಿರ್ಮಾಣಕ್ಕೆ ಕೂಡ ಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಸಿ. ಸಂಪತ್​ ಹೇಳಿದ್ದಾರೆ.

https://twitter.com/achlendra/status/1705941452763844684

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read