alex Certify Video | ಫುಟ್​ಬಾಲ್​ ನಲ್ಲಿ ಈ ರೀತಿ ಗೋಲು ಸಾಧಿಸಿದ್ದನ್ನು ನೀವು ನೋಡಿರಲು ಸಾಧ್ಯವೇ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಫುಟ್​ಬಾಲ್​ ನಲ್ಲಿ ಈ ರೀತಿ ಗೋಲು ಸಾಧಿಸಿದ್ದನ್ನು ನೀವು ನೋಡಿರಲು ಸಾಧ್ಯವೇ ಇಲ್ಲ

ಅಯೋವಾ ವಿಶ್ವವಿದ್ಯಾಲಯದ ವಿರುದ್ಧ ನಡೆದ ಕಾಲೇಜು ಮಟ್ಟದ ಫುಟ್​ಬಾಲ್​ ಪಂದ್ಯದಲ್ಲಿ ಜೋಯಿ ಮಹೋವಿ ಎಂಬ ಸ್ಪರ್ಧಿಯು ಉದ್ದೇಶಪೂರ್ವಕವಾಗಿ ಅಲ್ಲದೇ ಇದ್ದರೂ ಸಹ ಅತ್ಯಾಕರ್ಷಕ ಗೋಲು ದಾಖಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಥ್ರೋ ಇನ್​ ಸಂದರ್ಭದಲ್ಲಿ ಜೊಯಿ ಪಲ್ಟಿ ಹೊಡೆದಿದ್ದು ಅನಿರೀಕ್ಷಿತವಾಗಿ ಈ ಎಸೆತ ಗೋಲಿಗೆ ಹೋಗಿ ಬೀಳೋದ್ರಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗ್ತಿದೆ.

ವಿಶ್ವವಿದ್ಯಾನಿಲಯದ ಅಧಿಕೃತ ಅಥ್ಲೆಟಿಕ್ಸ್ ತಂಡವು X ನಲ್ಲಿನ ಪೋಸ್ಟ್‌ನೊಂದಿಗೆ ಈ ವಿಶೇಷವಾದ ಗೋಲ್​ನ್ನು ಸಂಭ್ರಮಿಸಿದೆ. ಮೊನ್ನೆ ನಡೆದ ಯುಎನ್​ಐ ವಿರುದ್ಧ ಡ್ರೇಕ್​ ವುಮನ್​ ಸಾಕರ್​ 2-1 ಅಂತರದಲ್ಲಿ ಗೆಲುವಿನ ನಗೆ ಬೀರಿದೆ. ಇದರಲ್ಲಿ ಜೋಯ್​ ಮುಹೋನಿ ಅವರ ಥ್ರೋ ಇನ್​ ಗೋಲ್​ ನಂಬಲಸಾಧ್ಯ ಎಂಬಂತಿದೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಫಿಫಾ ನಿಯಮಗಳ ಪ್ರಕಾರ, ಥ್ರೋ ಇನ್​ನಿಂದ ನೇರವಾಗಿ ಗೋಲು ಗಳಿಸಲು ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭಗಳಲ್ಲಿ ಹಾಲಿ ತಂಡಕ್ಕೆ ಶೂಟ್​ ನೀಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಝೋಯ್​ ಮಹೋನಿ ಗೋಲ್​ನ್ನು ಪರಿಗಣಿಸಲಾಗಿದೆ. ಏಕೆಂದರೆ ಚೆಂಡು ಸರಿಯಾದ ರೀತಿಯಲ್ಲಿ ಗೋಲ್​ ಮುಟ್ಟುವಲ್ಲಿ ಯಶಸ್ವಿಯಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...