alex Certify Viral Video | ಸಹಾಯಕನ ಮದುವೆಗೆ ದಿಢೀರ್​ ಭೇಟಿ ಕೊಟ್ಟು ಸಪ್ರೈಸ್​ ನೀಡಿದ ನಟ ಧನುಷ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಸಹಾಯಕನ ಮದುವೆಗೆ ದಿಢೀರ್​ ಭೇಟಿ ಕೊಟ್ಟು ಸಪ್ರೈಸ್​ ನೀಡಿದ ನಟ ಧನುಷ್

ಖ್ಯಾತ ತಮಿಳು ನಟ ಧನುಷ್​ ತಮ್ಮ ಅಸಿಸ್ಟಂಟ್​ ಮದುವೆಗೆ ಸಪ್ರೈಸ್​ ವಿಸಿಟ್​ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ತನ್ನ ಮದುವೆಗೆ ಧನುಷ್​ ಆಗಮಿಸಿದ್ದನ್ನು ಕಂಡು ವರ ಆನಂದ್​ ಸಂತೋಷಕ್ಕೆ ಪಾರವೇ ಇರಲಿಲ್ಲ. ನೂತನ ವಧು – ವರರಿಗೆ ಧನುಷ್​ ಶುಭಾಶಯ ಕೋರಿದ್ದು, ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನಟ ಧನುಷ್​​ ನೀಲಿ ಬಣ್ಣದ ಟೋಪಿ ಹಾಗೂ ನೀಲಿ ಬಣ್ಣದ ಜೀನ್ಸ್​ನಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಧನುಷ್​ ಜೊತೆಯಲ್ಲಿ ಮತ್ತೋರ್ವ ನಟ ಕೆನ್​ ಕರುಣಾಸ್​ ಕೂಡ ಆಗಮಿಸಿದ್ದರು. ಫೋಟೋಗಳಲ್ಲಿ ಧನುಷ್​​ ವಧು – ವರರಿಗೆ ಹಸ್ತಲಾಘವ ಮಾಡಿದ್ದಾರೆ.

ನಟ ಧನುಷ್​ರ ಈ ಸರಳ ನಡೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ನೆಟ್ಟಿಗರು ಧನುಷ್​ ತಮ್ಮ ತಂಡವನ್ನು ನೋಡಿಕೊಳ್ಳುವ ರೀತಿ, ಅವರೊಂದಿಗೆ ವರ್ತಿಸುವ ರೀತಿ ನಿಜಕ್ಕೂ ಇತರ ನಟರಿಗೆ ಮಾದರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಬಿಡುವಿಲ್ಲದ ಡಿ 50 ಸಿನಿಮಾದ ಶೆಡ್ಯೂಲ್​ ನಡುವೆಯೂ ಅವರು ಮದುವೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...