HomeKarnatakaಸಾಮಾಜಿಕ ಹೋರಾಟಗಾರನಿಂದಲೇ ಹೇಯ ಕೃತ್ಯ; ಅಪ್ರಾಪ್ತ ಬಾಲಕಿ ಮೇಲೆ 73 ವರ್ಷದ ವೃದ್ಧನಿಂದ ಅತ್ಯಾಚಾರ; ಬಾಲಕಿ...

ಸಾಮಾಜಿಕ ಹೋರಾಟಗಾರನಿಂದಲೇ ಹೇಯ ಕೃತ್ಯ; ಅಪ್ರಾಪ್ತ ಬಾಲಕಿ ಮೇಲೆ 73 ವರ್ಷದ ವೃದ್ಧನಿಂದ ಅತ್ಯಾಚಾರ; ಬಾಲಕಿ ಗರ್ಭಿಣಿ

ಹಾಸನ: ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ರಾಜ್ಯದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ 73 ವರ್ಷದ ವೃದ್ಧ ಅತ್ಯಾಚಾರವೆಸಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಮೀಸೆ ಮಂಜಯ್ಯ (73) ಎಂಬ ವೃದ್ಧ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಮೀಸೆ ಮಂಜಯ್ಯ ಸಾಮಾಜಿಕ ಹೋರಾಟಗಾರ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಮೀಸೆ ಮಂಜಯ್ಯನನ್ನು ವಶಕ್ಕೆ ಪಡೆದಿರುವ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿ, ವಿಚಾರಣೆ ನಡೆಸಿದ್ದಾರೆ. ಇನ್ನು ಮೀಸೆ ಮಂಜಯ್ಯ ವಿಧವಾ ವೇತನ, ಪಿಂಚಣಿ ಹಣ ಕೊಡಿಸುವುದಾಗಿ ಹೇಳಿ ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇನ್ನೊಂದೆಡೆ ಮಗಳು ಗರ್ಭಿಣಿ ಎಂಬ ವಿಷಯ ತಿಳಿದ ಬಾಲಕಿ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳೆಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular