HomeKarnatakaಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಸೆ. 25 ರಿಂದ ಸದಸ್ಯರ ಸಂಖ್ಯೆ, ಗಡಿ...

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಸೆ. 25 ರಿಂದ ಸದಸ್ಯರ ಸಂಖ್ಯೆ, ಗಡಿ ನಿರ್ಣಯ ಬಗ್ಗೆ ಅದಾಲತ್

ಬೆಂಗಳೂರು: ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಗಡಿ ನಿರ್ಣಯ ಬಗ್ಗೆ ಸೆಪ್ಟೆಂಬರ್ 25 ರಿಂದ ಅದಾಲತ್ ನಡೆಯಲಿದ್ದು, 10 ದಿನವಾದ ಆಕ್ಷೇಪಣೆಗಳ ಪರಿಶೀಲನೆ ನಡೆಸಲಾಗುವುದು.

ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಚುನಾಯಿತ ಸದಸ್ಯರ ಸಂಖ್ಯೆ, ಕ್ಷೇತ್ರಗಳ ಗಡಿ ನಿರ್ಣಯ ಕುರಿತಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸೆ. 19ರೊಳಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಸೆ. 25 ರಿಂದ ಅದಾಲತ್ ಮೂಲಕ ಪರಿಶೀಲಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಅದಾಲತ್ ನಡೆಯಲಿದೆ. ಸೆ. 25 ರಿಂದ ಅ. 5ರವರೆಗೆ ಜಿಲ್ಲಾವಾರು ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನೆ ನಡೆಸಲಾಗುವುದು.

ಸೆಪ್ಟೆಂಬರ್ 25 ರಂದು ಬೆಂಗಳೂರು ಗ್ರಾಮಾಂತರ,  ಬಾಗಲಕೋಟೆ, ಗದಗ ಜಿಲ್ಲೆ

ಸೆಪ್ಟೆಂಬರ್ 26ರಂದು ಹಾಸನ, ವಿಜಯನಗರ, ಹಾವೇರಿ, ಕೋಲಾರ

ಸೆಪ್ಟಂಬರ್ 27ರಂದು ಕಲಬುರಗಿ, ಮೈಸೂರು, ಯಾದಗಿರಿ, ವಿಜಯಪುರ

ಸೆಪ್ಟಂಬರ್ 29ರಂದು ಬೆಂಗಳೂರು ನಗರ, ಉತ್ತರ ಕನ್ನಡ, ಧಾರವಾಡ, ಕೊಪ್ಪಳ

ಸೆಪ್ಟೆಂಬರ್ 30ರಂದು ರಾಮನಗರ, ಬಳ್ಳಾರಿ, ಬೀದರ್, ಚಿಕ್ಕಮಗಳೂರು

ಅಕ್ಟೋಬರ್ 3ರಂದು ಚಿಕ್ಕಬಳ್ಳಾಪುರ, ಮಂಡ್ಯ, ಬೆಳಗಾವಿ, ತುಮಕೂರು,

ಅಕ್ಟೋಬರ್ 4ರಂದು ದಕ್ಷಿಣ ಕನ್ನಡ, ದಾವಣಗೆರೆ, ರಾಯಚೂರು, ಚಿತ್ರದುರ್ಗ

ಅಕ್ಟೋಬರ್ 5ರಂದು ಕೊಡಗು, ಚಾಮರಾಜನಗರ, ಶಿವಮೊಗ್ಗ ಮತ್ತು ಉಳಿದ ಪ್ರಕರಗಳ ಪರಿಶೀಲನೆ ನಡೆಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular